ಚಿಂಚೋಳಿ ಚೆಟ್ಟಿನಾಡ್ ಸಿಮೆಂಟ್ ಎದುರು ಪ್ರತಿಭಟನೆ: ಸ್ಥಳೀಯರ ಸಮಸ್ಯೆಗಳಿಗೆ ಪರಿಹಾರ ಕೋರಿ ಮಾರುತಿ ಗಂಜಗಿರಿ ನಿಯೋಗದಿಂದ ಮನವಿ
#ಚಿಂಚೋಳಿ ಚೆಟ್ಟಿನಾಡ್ ಸಿಮೆಂಟ್ ಎದುರು ಪ್ರತಿಭಟನೆ: ಸ್ಥಳೀಯರ ಸಮಸ್ಯೆಗಳಿಗೆ ಪರಿಹಾರ ಕೋರಿ ಮಾರುತಿ ಗಂಜಗಿರಿ ನಿಯೋಗದಿಂದ ಮನವಿ ! **ಕಲಬುರಗಿ / ಚಿಂಚೋಳಿ (ಕನ್ನಡ ಸಾಮ್ರಾಟ್ ವರದಿ):** ನೆಲ ನಮ್ಮದು, ಜಲ ನಮ್ಮದು, ಇಲ್ಲಿನ ಧೂಳು-ಹೊಗೆ ತಿನ್ನುತ್ತಾ ಬದುಕುತ್ತಿರುವ ಜನವೂ ನಮ್ಮವರೇ. ಆದರೆ ಕೈಗಾರಿಕೆಯ ಲಾಭ ಮಾತ್ರ ಹೊರಗಿನವರಿಗಾ? ಹೀಗೊಂದು ತೀವ್ರ ಆಕ್ರೋಶದ ಧ್ವನಿ ಈಗ ಕಲಬುರಗಿ ಜಿಲ್ಲೆಯ ಗಡಿ ತಾಲೂಕು ಚಿಂಚೋಳಿಯ ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆಯ ಮುಂಭಾಗದಲ್ಲಿ ಪ್ರತಿಧ್ವನಿಸುತ್ತಿದೆ. ಸ್ಥಳೀಯ ಟಿಪ್ಪರ್-ಲಾರಿ ಮಾಲೀಕರು, ವಾಹನ ಚಾಲಕರು…