**ಕನ್ನಡ ಸಾಮ್ರಾಟ್ ವಿಶೇಷ ವರದಿ:
ರಾಜ್ಯಪಾಲರ ಮಹತ್ವದ ನೇಮಕಾತಿ, ವರ್ಗಾವಣೆ ಆದೇಶ ಹೊರಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು**
**ನವದೆಹಲಿ:** ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಹಾಗೂ ಕೆಲವರನ್ನು ವರ್ಗಾವಣೆಗೊಳಿಸಿ ರಾಷ್ಟ್ರಪತಿ ಭವನದಿಂದ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಕರ್ನಾಟಕವೂ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ರಾಜ್ಯಪಾಲರ ಹುದ್ದೆಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ:
* **ಕರ್ನಾಟಕ:** ಡಾ. ಸುಧಾ ಯಾದವ್
* **ತಮಿಳುನಾಡು:** ರಾಜೇಂದ್ರ ವಿಶ್ವನಾಥ್ ಅರ್ಲೇಕರ್ (ಕೇರಳದಿಂದ ವರ್ಗಾವಣೆ)
* **ಕೇರಳ:** ಓಂ ಪ್ರಕಾಶ್ ಮಾಥುರ್ (ಸಿಕ್ಕಿಂನಿಂದ ವರ್ಗಾವಣೆ)
* **ಸಿಕ್ಕಿಂ:** ದುಶ್ಯಂತ್ ಗೌತಮ್
* **ಒಡಿಶಾ:** ಬ್ರಜ್ ಮೋಹನ್ ರಾಮ್
* **ಉತ್ತರಾಖಂಡ:** ಡಾ. ಧಾಲ್ ಸಿಂಗ್ ಬಿಸೇನ್
ನೇಮಕಗೊಂಡಿರುವ ಎಲ್ಲಾ ರಾಜ್ಯಪಾಲರು ತಮ್ಮ ಅಧಿಕಾರ ಸ್ವೀಕರಿಸಿದ ದಿನದಿಂದ ಈ ಆದೇಶಗಳು ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಕನ್ನಡ ಸಾಮ್ರಾಟ್ news ಬ್ಯುರೋ










