Home » ಕಲಬುರಗಿ » ಚಿಂಚೋಳಿ » ಭೀಮಣ್ಣ ಖಂಡ್ರೆಗೆ ಕರ್ನಾಟಕ ರತ್ನ ನೀಡಿ ಶರಣು ಮೋತಕಪಳ್ಳಿ

ಭೀಮಣ್ಣ ಖಂಡ್ರೆಗೆ ಕರ್ನಾಟಕ ರತ್ನ ನೀಡಿ ಶರಣು ಮೋತಕಪಳ್ಳಿ

*ಭೀಮಣ್ಣ ಖಂಡ್ರೆಗೆ ಕರ್ನಾಟಕ ರತ್ನ ನೀಡಿ ಶರಣು ಮೋತಕಪಳ್ಳಿ*
ಚಿಂಚೋಳಿ:
ಅಖಿಲ ಭಾರತ ವೀರಶೈವ ಲಿಂಗಾಯತ ಮಾಜಿ ಅಧ್ಯಕ್ಷರರು ಹಾಗೂ ಪ್ರಭಾವಿ ರಾಜಕಾರಣಿ ಭೀಮಣ್ಣ ಖಂಡ್ರೆಯವರಿಗೆ ಮರಣೋತ್ತರ *ಕರ್ನಾಟಕ ರತ್ನ* ನೀಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಚಿಂಚೋಳಿ ತಾಲೂಕ ಅಧ್ಯಕ್ಷರಾದ ಶರಣು ಪಾಟೀಲ ಮೋತಕಪಳ್ಳಿಯರು ಮಾತನಾಡಿ ಪತ್ರಿಕಾ ಪ್ರಕಟಣೆ ಮೂಲಕ ಕರ್ನಾಟಕ ಸರಕಾರಕ್ಕೆ ಒತ್ತಾಯ.
ಭೀಮಣ್ಣ ಖಂಡ್ರೆ ಜಿ ಯವರು ದೇಶದ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣಕ್ಕೆ ಹೋರಾಟ ಮತ್ತು ದಶಕಗಳ ಕಾಲ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿ ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಉಳಿವಿಗಾಗಿ ಶ್ರಮಿಸಿದ್ದಾರೆ. ಬಸವ ಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪದ ನಿರ್ಮಾಣಕ್ಕಾಗಿ ಭಾಲ್ಕಿ ಹಿರೇಮಠ ಸಂಸ್ಥಾನದ ಲಿಂಗೈಕ್ಯ ಡಾ|| ಚನ್ನಬಸವ ಪಟ್ಟ ದೇವರ ಹೆಗಲಿಗೆ ಹೆಗಲು ಕೊಟ್ಟು ಜೊತೆಗೂಡಿ ದುಡಿದವರು ಶೋಷಿತ ನಿರ್ಗತಿಕರ ಧ್ವನಿಯಾಗಿ ಅವರೆಲ್ಲದ ಕಷ್ಟಗಳನ್ನು ಆಲಿಸಿ ಅವರೆಲ್ಲರರಿಗೂ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದ್ದರು ಆದ್ದರಿಂದ ರಾಜ್ಯ ಸರ್ಕಾರ ಪರಿಗಣಿಸಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರಸಬೇಕೆಂದು ಸರಕಾರಕ್ಕೆ ಅಗ್ರಹಹಿಸಿದ್ದಾರೆ.

ಪ್ರತಿನಿಧಿ: ಮಲ್ಲಿಕಾರ್ಜುನ್ ಭುಶೆಟ್ಟಿ ಕನ್ನಡ ಸಾಮ್ರಾಟ್ news ಬ್ಯುರೋ ಚಿಂಚೋಳಿ

 

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted

ಇತ್ತೀಚಿನ ಸುದ್ದಿಗಳು