Home » ಕಲಬುರಗಿ » ಚಿಂಚೋಳಿ » ರುದನೂರ ಶ್ರೀ ತೊಂಟದಾರ್ಯ ಸಿದ್ದೇಶ್ವರ ಮಠದ ಪಲ್ಲಕ್ಕಿ ಉತ್ಸವ !

ರುದನೂರ ಶ್ರೀ ತೊಂಟದಾರ್ಯ ಸಿದ್ದೇಶ್ವರ ಮಠದ ಪಲ್ಲಕ್ಕಿ ಉತ್ಸವ !

ರುದನೂರ ಶ್ರೀ ತೊಂಟದಾರ್ಯ ಸಿದ್ದೇಶ್ವರ ಮಠದ ಪಲ್ಲಕ್ಕಿ ಉತ್ಸವ ಸೆಪ್ಟೆಂಬರ್ 26 ಕ್ಕೆ!
ಚಿಂಚೋಳಿ:
ಚಿಂಚೋಳಿ ತಾಲೂಕಿನ ರುದನೂರ ಗ್ರಾಮದ ಆರಾಧ್ಯ ದೇವರಾದ ಶ್ರೀ ತೊಂಟದಾರ್ಯ ಸಿದ್ದೇಶ್ವರ ಮಠದ ಪಲ್ಲಕಿ ಉತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ 5 ದಿನಗಳ ಕಾಲ ನಡೆಯಲಿರುವ ಪಲ್ಲಕಿ ಉತ್ಸವ ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನ ಕಮಿಟಿಯವರು ತಿಳಿಸಿದ್ದಾರೆ
ಪ್ರತಿ ದಿನ ರಾತ್ರಿ 8 ಗಂಟೆಯಿಂದ 12 ಗಂಟೆವರೆಗೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಪಲ್ಲಕಿಯ ಜೊತೆಗೆ ಭಜನೆ ತಂಡ ಹಾಗೂ ವಾದ್ಯ ಮೇಳ ಡೊಳ್ಳು ಕುಣಿತದೊಂದಿಗೆ ಊರಿನ ಪ್ರತಿಯೊಂದು ಮನೆಯಿಂದ ಶ್ರೀಗಳಿಗೆ ಜನರು ಕಾಯಿ ಕರ್ಪುರ ತಂದು ಅರ್ಪಿಸಿ ಆಶೀರ್ವಾದ ಪಡೆಯುತ್ತಾರೆ
ದಿನಾಂಕ 25.09.2026 ಶುಕ್ರವಾರದಂದು ಬೆಳಗ್ಗೆ ಗೌಡರ ಮನೆಯಿಂದ ಅಭಿಷೇಕ ಕುಂಭ ಹತ್ತಿಕೊಂಡು ಬಾಧ್ಯ ಮೇಳದೊಂದಿಗೆ ಶ್ರೀ ತೊಂಟಾದ ಸಿದ್ದೇಶ್ವರ ಕರ್ತೃಗದ್ದೆಗೆ ಮಹಾಭಿಷೇಕ ಮಾಡಲಾಗುತ್ತದೆ. ಅದರಂತೆ ಮಹಾಪ್ರಸಾದ ನಡೆಯಲಾಗುತ್ತೆ
ದಿನಾಂಕ 26.09. 2026 ರಂದು ಬೆಳಗ್ಗೆ ಸಿದ್ದೇಶ್ವರ ಶ್ರೀಗಳ ಪಲ್ಲಕ್ಕಿ ಉತ್ಸವ ರೂದ್ದೂರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಮಲ್ಲಿಕಾರ್ಜುನ್ ಸ್ವಾಮಿಗಳ ನೇತೃತ್ವದಲ್ಲಿ ಅದ್ದೂರಿಯಾಗಿ ಬೆಳಗ್ಗೆ 9:00 ಗಂಟೆಯಿಂದ ಸಾಯಂಕಾಲ 5:00 ವರೆಗೆ ಊರಿನ ವಿವಿಧ ಬಜನೆ ತಂಡಗಳು ಪುರಂತರ ಆಟ ವಾದ್ಯಮೇಳ ಹಾಗೂ ವಿವಿಧ ಕಲಾತಂಡಗಳ ಜೊತೆಗೆ ಶಾಲಾ ಮಕ್ಕಳ ಕೋಲಾಟ ಅನೇಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನ ಕಮಿಟಿಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಕೊಡದುರ ರವರು ನಮ್ಮೊಂದಿಗೆ ಮಾತನಾಡಿ
ಅಕ್ಕ ಪಕ್ಕದ ಊರಿನ ಜನರು ಹಾಗೂ ಜನ ಪ್ರತಿನಿಧಿಗಳು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ

ಪ್ರತಿನಿಧಿ: ಮಲ್ಲಿಕಾರ್ಜುನ್ ಭೂಶೆಟ್ಟಿ ಕನ್ನಡ ಸಾಮ್ರಾಟ್ news ಬ್ಯುರೋ chincholi

 

Share This

Facebook
X
WhatsApp
0 0 votes
Article Rating
Subscribe
Notify of
guest
2 Comments
Oldest
Newest Most Voted
Suryakant
Suryakant
1 month ago

Super article

Basavaraju
Basavaraju
1 month ago

శ్రీ తోతద్ధ్యర్య సిద్దేశ్వర ఆలయం rudanoor

ಇತ್ತೀಚಿನ ಸುದ್ದಿಗಳು