RBI Masterplan: ಕಾಗದದ ನೋಟುಗಳಿಗೆ ಗುಡ್ಬೈ! ಶೀಘ್ರದಲ್ಲೇ ಬರಲಿದೆ ಪಾಲಿಮರ್ ಪ್ಲಾಸ್ಟಿಕ್ ನೋಟು, ವಿಶ್ವದ ಯಾವೆಲ್ಲಾ ದೇಶಗಳಲ್ಲಿ ಇದರ ಬಳಕೆಯಿದೆ?
ಹಣ ಮುದ್ರಣದ ಖರ್ಚು ಉಳಿಸಲು ಹಾಗೂ ನಕಲಿ ನೋಟುಗಳ ಹಾವಳಿಗೆ ಬ್ರೇಕ್ ಹಾಕಲು ದಶಕದ ಹಿಂದಿನ ಪ್ಲಾನ್ ಅನ್ನು ಮತ್ತೆ ಕೈಗೆತ್ತಿಕೊಂಡ ಭಾರತೀಯ ರಿಸರ್ವ್ ಬ್ಯಾಂಕ್. ಏನಿದು ಪಾಲಿಮರ್ ನೋಟು? ಜಗತ್ತಿನ ಯಾವ ದೇಶಗಳಲ್ಲಿ ಈ ಪ್ಲಾಸ್ಟಿಕ್ ನೋಟುಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ. ನವದೆಹಲಿ (ಕನ್ನಡ ಸಾಮ್ರಾಟ್ ವಿಶೇಷ ವರದಿ): ನಿಮ್ಮ ಜೇಬಿನಲ್ಲಿರುವ ಕಾಗದದ ನೋಟುಗಳು ಹರಿದುಹೋಗುವ, ಮಳೆಗೆ ನೆನೆದು ಹಾಳಾಗುವ ಹಾಗೂ ಕೊಳೆಯಾಗುವ ಚಿಂತೆ ಇನ್ನು ಮುಂದೆ ಇರುವುದಿಲ್ಲ. ಹೌದು, ಭಾರತೀಯ ರಿಸರ್ವ್ ಬ್ಯಾಂಕ್ (RBI)…