- ಕಲಬುರಗಿ ಕೃಷಿ ವಲಯಕ್ಕೆ ‘ಅಂತರಾಷ್ಟ್ರೀಯ’ ಗರಿ: ಪೀಡೆನಾಶಕ ಪ್ರಯೋಗಾಲಯಕ್ಕೆ ಈಗ NABL ಮಾನ್ಯತೆ!
ಕಲಬುರಗಿ: ಕಲ್ಯಾಣ ಕರ್ನಾಟಕದ ಕೃಷಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಇಲ್ಲಿನ ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆ (SPTL) ಈಗ ಅಂತರಾಷ್ಟ್ರೀಯ ಮಟ್ಟದ NABL (ISO/IEC 17025) ಮಾನ್ಯತೆ ದೊರೆತಿದೆ.
ಗುಣಮಟ್ಟದ ಪರೀಕ್ಷೆ ಮತ್ತು ನಿಖರತೆಗೆ ಸಂದ ಈ ಗೌರವದಿಂದಾಗಿ, ಕಲಬುರಗಿ ಪ್ರಯೋಗಾಲಯದ ವರದಿಗಳಿಗೆ ಇನ್ಮುಂದೆ ಜಾಗತಿಕ ಮನ್ನಣೆ ಸಿಗಲಿದೆ. ಇದರಿಂದ ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ರೈತರಿಗೆ ಗುಣಮಟ್ಟದ ಕೀಟನಾಶಕ ಲಭ್ಯತೆ ಖಚಿತವಾಗಲಿದೆ. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಈ ಮಾನ್ಯತೆ ಪತ್ರವನ್ನು ಹಸ್ತಾಂತರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಾಧನೆಯಿಂದ ರಾಜ್ಯದ ಒಟ್ಟು 6 ಪ್ರಯೋಗಾಲಯಗಳು NABL ಪಟ್ಟಿಗೆ ಸೇರಿದಂತಾಗಿದೆ.
Kalaburagi / #Gulbarga
#KalyanaKarnataka
#AgricultureIndia
#FarmingTrends2026
#NABL






