ಕೋಲಿ-ಕಬ್ಬಲಿಗ ಚುನಾವಣೆಯಲ್ಲಿ ಅಕ್ರಮ; ದೌಲಪ್ಪ ಸುಣಗಾರ ಆಪಾದನೆ?
ಚಿಂಚೋಳಿ:- ಚಿಂಚೋಳಿ ತಾಲ್ಲೂಕಿನಲ್ಲಿ ಇದೆ 23 ರಂದು ನಡೆದ ಕೋಲಿ-ಕಬ್ಬಲಿಗ ಸಮಾಜದ ಚುನಾವಣೆಯಲ್ಲಿ ಅಕ್ರಮ ಮತ ಚಲಾವಣೆಯಾಗಿವೆ ಎಂದು ಆರೋಪಿಸಿ ಕಬ್ಬಲಿಗ ಸಮಾಜದ ಮುಖಂಡರು ದೌಲಪ್ಪ ಸುಣಗಾರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ಪತ್ರಿಕೆಗೋಷ್ಟಿಯಲ್ಲಿ ಮಾತನಾಡಿದ ದೌಲಪ್ಪ ಸುಣಗಾರ, ಸದರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡದಂತೆ ತಡೆ ಹಿಡಿಯಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಎಂದರು. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಬಾಂಧವ್ಯ, ಸಾಮರಸ್ಯ ಕಾಪಾಡಿಕೊಳ್ಳದೆ ನನ್ನನ್ನು ಬೆಂಬಲಿಸಿದ ಸಂಘದ ಸದಸ್ಯರಿಗೆ ಹಾಗೂ ಸಮಾಜದ ಯುವಕರನ್ನು ಗುರಿ ಮಾಡಿ ಅವರಿಗೆ ಬೆದರಿಕೆ ಹಾಗೂ ಅವಹೇಳನಕಾರಿಯಾಗಿ ಪರೋಕ್ಷವಾಗಿ ಮಾತನಾಡುತ್ತಿರುವುದು ಸರಿಯಲ್ಲ ನಾವೆಲ್ಲರೂ ಒಂದೇ ಸಮಾಜದ ಸಹೋದರರು ಈ ರೀತಿಯಾಗಿ ವರ್ತಿಸುವುದು ಅನುಚಿತ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಈರಪ್ಪ ನಾಟಿಕಾರ, ವಿಜಯಕುಮಾರ ಅಣವಾರ, ರೇವಪ್ಪ ಚನ್ನೂರ, ಸುನಿಲ ತೋಡಿ, ಶಿವಕುಮಾರ ಕಲ್ಲೂರ, ಶಿವು ಮದ್ದರಕಿ ಸೇರಿದಂತೆ ಇನ್ನಿತರ ಕೋಲಿ ಕಬ್ಬಲಿಗ ಸಮಾಜದ ಸದಸ್ಯರು ಭಾಗಿಯಾಗಿದ್ದರು.
ರಿಪೋರ್ಟರ್ : ಹರ್ಷಾ ಚಿಮ್ಮನಕಟ್ಟಿ
ಹೆಚ್ಚಿನ ಸುದ್ದಿಗಳಿಗಾಗಿ ವಿಸಿಟ್ KannadaSamrat.com






