ಚಿಂಚೋಳಿಯಲ್ಲಿ ಭಾರತೀಯ ದಲಿತ ಪ್ಯಾಂಥರ್ ನೂತನ ತಾಲೂಕು ಸಮಿತಿ ರಚನೆ: ಚೇತನ್ ನಿರಾಳಕರ ಅಧ್ಯಕ್ಷರಾಗಿ ಸರ್ವಾನುಮತ ಆಯ್ಕೆ
ಚಿಂಚೋಳಿ ಪಟ್ಟಣದ ಪೋಲಕಪಳ್ಳಿ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷರಾದ ಮಲ್ಲಪ್ಪ ಹೊಸಮನಿಯವರ ಮಾರ್ಗದರ್ಶದಂತೆ ದಲಿತ ಪ್ಯಾಂಥರ್ ಜಿಲ್ಲಾ ಅಧ್ಯಕ್ಷರಾದ ರಮೇಶ ಚಿಮ್ಮಇದಲಾಯಿ ರವರ ನೇತೃತ್ವದಲ್ಲಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಭರತ ಬುಳ್ಳ, ಪ್ರಧಾನ ಕಾರ್ಯದರ್ಶಿ ಸಂತೋಷ್ ಮಾಡಬುಳ, ಜಿಲ್ಲಾ ಉಪಾಧ್ಯಕ್ಷರಾದ ಭೀಮಶಂಕರ್ ದಂಡೆ, ಮುಂದಾಳತ್ವದಲ್ಲಿ ನೂತನ ತಾಲೂಕು ಸಮಿತಿ ಹಾಗೂ ವಿವಿಧ ಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು,
ಈ ಸಂಧರ್ಭದಲ್ಲಿ ಚೇತನ್ ನಿರಾಳಕರರವರನ್ನು ತಾಲೂಕು ಅಧ್ಯಕ್ಷರನ್ನಾಗಿ ಸರ್ವನುಮತದಿಂದ ಆಯ್ಕೆಮಾಡಲಾಯಿತು, ಪ್ರಧಾನ ಕಾರ್ಯದರ್ಶಿಯಾಗಿ ರಘುವೀರ ಚಿಮ್ಮನಚೋಡ್, ಉಪಾಧ್ಯಕ್ಷರುಗಳಾಗಿ, ಪರಮೇಶ್ವರ ಗಿರಿ ಹಾಗೂ ವಿಶ್ವನಾಥ್ ದಸ್ತಾಪುರ, ಸಹ ಕಾರ್ಯದರ್ಶಿ ರೇವಣಸಿದ್ಧ ಸೂಗೂರು, ಸಂಘಟನ ಕಾರ್ಯದರ್ಶಿ ಖತಲಪ್ಪ ಬಸವನೋರ್,ಅವರನ್ನು ಹಾಗೂ ಸುಲೇಪೇಟ ಹೋಬಳಿ ಘಟಕ ಅಧ್ಯಕ್ಷರಾಗಿ ಪ್ರಕಾಶ ಗುಲಗುಂಜಿ, ಉಪಾಧ್ಯಕ್ಷರಾಗಿ ಗುರು ವಾಲಿಕಾರ,
ನಗರ ಅಧ್ಯಕ್ಷರಾಗಿ ನಾಗಸೇನೆ ಬೋಮ್ನಳ್ಳಿ, ಹಾಗೂ ಸುಲೇಪೇಟ ಗ್ರಾಮ ಘಟಕ ಅಧ್ಯಕ್ಷರಾಗಿ ಸುಭಾಷ ಗಂಜಗಿರಿ, ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ್ ಮಾದೇಶಿ ಅವರನ್ನು ಆಯ್ಕೆಮಾಡಲಾಯಿತು







