ಕಣ್ಣೀರ ಕಡಲಾದ 113 ದಿನಗಳ ಹೋರಾಟ: ಕೇರಳ ಸಚಿವಾಲಯದ ಮುಂದೆ ತಲೆ ಬೋಳಿಸಿಕೊಂಡು ಶಿಕ್ಷಕಿ ಆಕ್ರೋಶ!
“ಪುಸ್ತಕ ಹಿಡಿದು ಪಾಠ ಮಾಡಬೇಕಿದ್ದ ಕೈಗಳು ಇಂದು ಅನ್ನ-ನೀರು ಬಿಟ್ಟು ಭಿಕ್ಷೆ ಬೇಡುವಂತಾಗಿದೆ…” – ಪಿಎಸ್ಸಿ ನೇಮಕಾತಿ ವಿಳಂಬ ಖಂಡಿಸಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಆಕಾಂಕ್ಷಿಗಳ ಆಕ್ರಂದನ. ತಿರುವನಂತಪುರಂ (ಕನ್ನಡ ಸಾಮ್ರಾಟ್ ಬ್ಯೂರೋ): ಓದಿ, ಪದವಿ ಪಡೆದು, ಹಗಲಿರುಳು ನಿದ್ದೆಗೆಟ್ಟು ಸ್ಪರ್ಧಾತ್ಮಕ ಪರೀಕ್ಷೆ ಬರೆದು ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ಸರ್ಕಾರಿ ಶಾಲೆಗಳ ಮೆಟ್ಟಿಲು ಹತ್ತಲು ಸಾಧ್ಯವಾಗದ ಯುವಜನತೆಯ ಅಸಹಾಯಕತೆ ಎಂಥವರ ಕರುಳು ಕಿವುಚುವಂತಿದೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಕಳೆದ 113 ದಿನಗಳಿಂದ ನಡೆಯುತ್ತಿರುವ ಶಿಕ್ಷಕರ…