ಚಿಂಚೋಳಿ; ಬಾಲಕಾರ್ಮಿಕತೆಯ ಜಾಗೃತಿ ಕಾರ್ಯಕ್ರಮ.
ಚಿಂಚೋಳಿ; ಬಾಲಕಾರ್ಮಿಕತೆಯ ಜಾಗೃತಿ ಕಾರ್ಯಕ್ರಮ. ಚಿಂಚೋಳಿ: ಮಾರ್ಗದರ್ಶಿ ಸಂಸ್ಥೆ, ಚೈಲ್ಡ್ಲೈನ್, ಕಾರ್ಮಿಕ ಇಲಾಖೆ ಹಾಗೂ ಚಿಂಚೋಳಿ ಪೊಲೀಸ್ ಠಾಣೆಯ ಸಹಯೋಗದಲ್ಲಿ ಚಿಂಚೋಳಿ ಮತ್ತು ಚಂದಾಪುರ ನಗರಗಳಲ್ಲಿನ ವಿವಿಧ ಅಂಗಡಿಗಳಲ್ಲಿ ಬಾಲ ಕಾರ್ಮಿಕತೆ ಪರಿಶೀಲನೆ ಹಾಗೂ ಜಾಗೃತಿ ಕಾರ್ಯಾಚರಣೆ ನಡೆಸಲಾಯಿತು.ಕಾರ್ಯಾಚರಣೆ ಸಂದರ್ಭದಲ್ಲಿ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಅಂಗಡಿ ಮಾಲೀಕರಿಗೆ ಜಾಗೃತಿ ಮೂಡಿಸಲಾಯಿತು. ಮಕ್ಕಳನ್ನು ಬಾಲಕಾರ್ಮಿಕತೆಯಿಂದ ದೂರವಿಟ್ಟು ಅವರ ಶಿಕ್ಷಣ, ಸುರಕ್ಷತೆ ಹಾಗೂ ಭವಿಷ್ಯವನ್ನು ರಕ್ಷಿಸುವ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಚಿಂಚೋಳಿ…