Home » ನ್ಯೂಸ್ » Kalaburgi » ಡಾಲ್ ಮಿಲ್ಲರ್‌ಗಳಿಗೆ ಜಾಗತಿಕ ಮಾರುಕಟ್ಟೆಯ ಪಾಠ: ರಫ್ತು-ಆಮದು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಡಾಲ್ ಮಿಲ್ಲರ್‌ಗಳಿಗೆ ಜಾಗತಿಕ ಮಾರುಕಟ್ಟೆಯ ಪಾಠ: ರಫ್ತು-ಆಮದು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಡಾಲ್ ಮಿಲ್ಲರ್‌ಗಳಿಗೆ ರಫ್ತು–ಆಮದು ತರಬೇತಿ ಜಾಗತಿಕ ಮಾರುಕಟ್ಟೆ ಅವಕಾಶಗಳ ಕುರಿತು ಸಮಗ್ರ ಮಾಹಿತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಅರುಣ್ ಕುಮಾರ್ ಪಾಟೀಲ್ ಅವರಿಂದ.

ಕಲಬುರಗಿ : ಗುಲ್ಬರ್ಗ ಡಾಲ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ, APEDA ಬೆಂಬಲ ಹಾಗೂ ಪುಣೆಯ ಅಷ್ಟಂ ಟ್ರೇಡಿಂಗ್ ಸಹಯೋಗದಲ್ಲಿ ಡಾಲ್ ಮಿಲ್ಲರ್‌ಗಳಿಗಾಗಿ ಆಯೋಜಿಸಿದ್ದ ವಿಶೇಷ ‘ರಫ್ತು ಮತ್ತು ಆಮದು ಜಾಗೃತಿ ತರಬೇತಿ ಕಾರ್ಯಕ್ರಮ’ ಭಾನುವಾರ ನಗರದ ನೆಹರು ಗಂಜ್‌ನ ಎಸ್.ಬಿ. ಪಾಟೀಲ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಉದ್ಘಾಟಿಸಿ ಮಾತನಾಡಿ, ಕಲಬುರಗಿ ಜಿಲ್ಲೆಯ ದಾಲ್ ಉದ್ಯಮಕ್ಕೆ ದೇಶ-ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಅವಕಾಶಗಳಿದ್ದು, ಇಂತಹ ತರಬೇತಿ ಕಾರ್ಯಕ್ರಮಗಳು ಉದ್ಯಮಿಗಳಿಗೆ ಹೊಸ ದಿಕ್ಕು ತೋರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದು ರಫ್ತು ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ ಮಾತನಾಡಿ, ದಾಲ್ ಉದ್ಯಮವು ಕಲ್ಯಾಣ ಕರ್ನಾಟಕದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಗುಣಮಟ್ಟದ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಅಗತ್ಯವಾದ ಜ್ಞಾನ ಮತ್ತು ತರಬೇತಿ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ತರಬೇತಿಯನ್ನು ಅಷ್ಟಂ ಟ್ರೇಡಿಂಗ್ ಸಂಸ್ಥಾಪಕ ರಮೇಶ್ ಕಡಗಂಚಿ, ನಿರ್ದೇಶಕ ಯು. ಧರ್ಮರಾವ್ ಹಾಗೂ ಡಿಟಿಸಿ ತರಬೇತುದಾರ ಸುರೇಶ್ ಪೂಜಾರ್ (ಬೆಂಗಳೂರು) ನಡೆಸಿಕೊಟ್ಟರು. ಅವರು ರಫ್ತು–ಆಮದು ಪ್ರಕ್ರಿಯೆಗಳು, ಅಂತರರಾಷ್ಟ್ರೀಯ ಮಾರುಕಟ್ಟೆಯ ಅವಕಾಶಗಳು, ಗುಣಮಟ್ಟದ ಮಾನದಂಡಗಳು, ಅಗತ್ಯ ದಾಖಲೆಗಳು, ಸರ್ಕಾರಿ ಯೋಜನೆಗಳು ಹಾಗೂ ರಫ್ತು ವಿಸ್ತರಣೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಜೊತೆಗೆ ರಫ್ತು ವ್ಯವಹಾರದಲ್ಲಿ ಎದುರಾಗುವ ಸವಾಲುಗಳು ಮತ್ತು ಅವುಗಳನ್ನು ಯಶಸ್ವಿಯಾಗಿ ಎದುರಿಸುವ ಮಾರ್ಗಗಳನ್ನೂ ವಿವರಿಸಿದರು.

ಈ ಸಂದರ್ಭದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪ, ಕಾಂಗ್ರೆಸ್ ಮುಖಂಡ ಫರಾಜುಲ್ ಇಸ್ಲಾಂ, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿ ಸಂಘದ ಅಧ್ಯಕ್ಷ ಸಂತೋಷ್ ಲ್ಯಾಂಗರ್, ಗುಲ್ಬರ್ಗ ಡಾಲ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಕೋಬಾಲ್, ಜಿಡಿಎಂಎ ಕಾರ್ಯದರ್ಶಿ ಹಣಮಂತರಾಯ ಎಂ ತೋಟನಳ್ಳಿ ಸೇರಿದಂತೆ ಸದಸ್ಯರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಡಾಲ್ ಮಿಲ್ಲರ್‌ಗಳಿಗಾಗಿಯೇ ವಿಶೇಷವಾಗಿ ಆಯೋಜಿಸಿದ್ದ ಈ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕ ದಾಲ್ ಮಿಲ್ಲರ್‌ಗಳು ಭಾಗವಹಿಸಿ, ರಫ್ತು–ಆಮದು ಕ್ಷೇತ್ರದ ಕುರಿತು ಉಪಯುಕ್ತ ಮಾಹಿತಿ ಪಡೆದು ಕಾರ್ಯಕ್ರಮದ ಪ್ರಯೋಜನ ಪಡೆದರು.

 

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted

ಇತ್ತೀಚಿನ ಸುದ್ದಿಗಳು