Home » ಕಲಬುರಗಿ » ಚಿಂಚೋಳಿ » ಚಿಂಚೋಳಿ; ಬಾಲಕಾರ್ಮಿಕತೆಯ ಜಾಗೃತಿ ಕಾರ್ಯಕ್ರಮ.

ಚಿಂಚೋಳಿ; ಬಾಲಕಾರ್ಮಿಕತೆಯ ಜಾಗೃತಿ ಕಾರ್ಯಕ್ರಮ.

ಚಿಂಚೋಳಿ; ಬಾಲಕಾರ್ಮಿಕತೆಯ ಜಾಗೃತಿ ಕಾರ್ಯಕ್ರಮ.

ಚಿಂಚೋಳಿ: ಮಾರ್ಗದರ್ಶಿ ಸಂಸ್ಥೆ, ಚೈಲ್ಡ್‌ಲೈನ್, ಕಾರ್ಮಿಕ ಇಲಾಖೆ ಹಾಗೂ ಚಿಂಚೋಳಿ ಪೊಲೀಸ್ ಠಾಣೆಯ ಸಹಯೋಗದಲ್ಲಿ ಚಿಂಚೋಳಿ ಮತ್ತು ಚಂದಾಪುರ ನಗರಗಳಲ್ಲಿನ ವಿವಿಧ ಅಂಗಡಿಗಳಲ್ಲಿ ಬಾಲ ಕಾರ್ಮಿಕತೆ ಪರಿಶೀಲನೆ ಹಾಗೂ ಜಾಗೃತಿ ಕಾರ್ಯಾಚರಣೆ ನಡೆಸಲಾಯಿತು.ಕಾರ್ಯಾಚರಣೆ ಸಂದರ್ಭದಲ್ಲಿ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಅಂಗಡಿ ಮಾಲೀಕರಿಗೆ ಜಾಗೃತಿ ಮೂಡಿಸಲಾಯಿತು. ಮಕ್ಕಳನ್ನು ಬಾಲಕಾರ್ಮಿಕತೆಯಿಂದ ದೂರವಿಟ್ಟು ಅವರ ಶಿಕ್ಷಣ, ಸುರಕ್ಷತೆ ಹಾಗೂ ಭವಿಷ್ಯವನ್ನು ರಕ್ಷಿಸುವ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಚಿಂಚೋಳಿ ಪೊಲೀಸ್ ಠಾಣೆಯ ಪಿ. ಎಸ್. ಐ ಗಂಗಮ್ಮ,ಮಾರ್ಗದರ್ಶಿ ಸಂಸ್ಥೆಯ ಕಮ್ಯುನಿಟಿ ಆರ್ಗನೈಸರ್ ಪ್ರಮೋದ,ಹಾಗೂ ಮಕ್ಕಳ ಸಹಾಯವಾಣಿಯ ದೇವೇಂದ್ರಪ್ಪ ಸೇರಿದಂತೆ ಇನ್ನಿತರ ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಾಲಕಾರ್ಮಿಕತೆ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿ. ಮಕ್ಕಳನ್ನು ಕೆಲಸಕ್ಕೆ ಬಳಸದೆ, ಅವರ ಶಿಕ್ಷಣ ಮತ್ತು ಉತ್ತಮ ಭವಿಷ್ಯವನ್ನು ರಕ್ಷಿಸೋಣ ಎಂಬ ಸಂದೇಶವನ್ನು ನೀಡಲಾಯಿತು.

— ಕನ್ನಡ ಸಾಮ್ರಾಟ್ ನ್ಯೂಸ್ ವರದಿಗಾರ, ಚಿಂಚೋಳಿ (WhatsApp 9547012333)

 

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted

ಇತ್ತೀಚಿನ ಸುದ್ದಿಗಳು