Home » ಬೆಂಗಳೂರು » ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ: 30 ಸಚಿವರಿಗೆ ತಕ್ಷಣವೇ ಜಿಲ್ಲಾ ಪ್ರವಾಸ ಕೈಗೊಳ್ಳಲು ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಆದೇಶ

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ: 30 ಸಚಿವರಿಗೆ ತಕ್ಷಣವೇ ಜಿಲ್ಲಾ ಪ್ರವಾಸ ಕೈಗೊಳ್ಳಲು ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಆದೇಶ

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ: 30 ಸಚಿವರಿಗೆ ತಕ್ಷಣವೇ ಜಿಲ್ಲಾ ಪ್ರವಾಸ ಕೈಗೊಳ್ಳಲು ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಆದೇಶ
​ಬೆಂಗಳೂರು: ರಾಜ್ಯದಾದ್ಯಂತ ವರದಿಯಾಗುತ್ತಿರುವ ಅತಿವೃಷ್ಟಿ ಹಾಗೂ ಕೆಲವೆಡೆ ಕಾಡುತ್ತಿರುವ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಜನಸಾಮಾನ್ಯರ ನೆರವಿಗೆ ಧಾವಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಚಿವ ಸಂಪುಟದ 30 ಸಹೋದ್ಯೋಗಿಗಳಿಗೆ ತಕ್ಷಣವೇ ತಮಗೆ ವಹಿಸಿರುವ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವಂತೆ ತುರ್ತು ಸೂಚನೆ ನೀಡಿದ್ದಾರೆ.
​ಸರ್ಕಾರವು ಕೇವಲ ವಿಧಾನಸೌಧದ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ, ಜನರ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರು ಕೇವಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುವುದಷ್ಟೇ ಅಲ್ಲದೆ, ಪ್ರತಿಯೊಂದು ತಾಲೂಕುಗಳಿಗೂ ತೆರಳಿ ವಾಸ್ತವ ಸ್ಥಿತಿಯನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ನಿರ್ದೇಶಿಸಲಾಗಿದೆ.
​ವರದಿ ಸಲ್ಲಿಕೆಗೆ ಕಟ್ಟುನಿಟ್ಟಿನ ಸೂಚನೆ
​ಕ್ಷೇತ್ರ ಮಟ್ಟದಲ್ಲಿನ ನೈಜ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ, ಎಲ್ಲಾ ಸಚಿವರುಗಳು ತಮ್ಮ ಸಮಗ್ರ ವರದಿಯನ್ನು ಆದಷ್ಟು ಬೇಗನೆ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಇದರಿಂದ ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಲು ಸರ್ಕಾರಕ್ಕೆ ಅನುಕೂಲವಾಗಲಿದೆ.
ಯಾವ ಸಚಿವರಿಗೆ ಯಾವ ಜಿಲ್ಲೆಯ ಹೊಣೆ? ಇಲ್ಲಿದೆ ಸಂಪೂರ್ಣ ಪಟ್ಟಿ
​ಸರ್ಕಾರದ ಅಧಿಕೃತ ಆದೇಶದ ಪ್ರಕಾರ ಸಚಿವರಿಗೆ ಹಂಚಿಕೆ ಮಾಡಿರುವ ಜಿಲ್ಲೆಗಳ ವಿವರ ಈ ಕೆಳಗಿನಂತಿದೆ:

ಕ್ರ.ಸಂ ಮಾನ್ಯ ಸಚಿವರು (ಶ್ರೀಯುತರು) ಹಂಚಿಕೆ ಮಾಡಿರುವ ಜಿಲ್ಲೆ

1 ಡಾ. ಜಿ. ಪರಮೇಶ್ವರ – ತುಮಕೂರು

2 ರಘುಮೂರ್ತಿ – ಚಿತ್ರದುರ್ಗ

3 ಬಿ.ಎಸ್. ಸುರೇಶ್ (ಭೈರತಿ) – ಚಿಕ್ಕಬಳ್ಳಾಪುರ

4 ಕೆ.ಹೆಚ್. ಮುನಿಯಪ್ಪ -ಬೆಂಗಳೂರು ಗ್ರಾಮಾಂತರ

5 ರಾಮಲಿಂಗ ರೆಡ್ಡಿ -ಕೋಲಾರ

6 ಹೆಚ್. ಸಿ. ಬಾಲಕೃಷ್ಣ -ಬೆಂಗಳೂರು ದಕ್ಷಿಣ

7 ಬಿ.ಝೆಡ್. ಜಮೀರ್ ಅಹ್ಮದ್ ಖಾನ್- ವಿಜಯನಗರ

8 ಕೆ.ಜೆ. ಜಾರ್ಜ್ -ಚಿಕ್ಕಮಗಳೂರು

9 ಕೆ.ಎಂ. ಶಿವಲಿಂಗೇಗೌಡ -ಹಾಸನ

10 ಮಧು ಬಂಗಾರಪ್ಪ -ಶಿವಮೊಗ್ಗ

11 ಎಂ.ಬಿ. ಪಾಟೀಲ್ – ವಿಜಯಪುರ

12 ವಿಜಯಾನಂದ ಕಾಶಪ್ಪನವರ – ಬಾಗಲಕೋಟೆ

13 ಬಸವರಾಜ ರಾಯರೆಡ್ಡಿ -ಗದಗ

14 ಎಸ್. ಎಸ್. ಮಲ್ಲಿಕಾರ್ಜುನ -ದಾವಣಗೆರೆ

15 ರುದ್ರಪ್ಪ ಲಮಾಣಿ -ಹಾವೇರಿ

16 ಸತೀಶ್ ಜಾರಕಿಹೊಳಿ -ಬೆಳಗಾವಿ

17 ಸಂತೋಷ್ ಲಾಡ್ -ಧಾರವಾಡ

18 ಲಕ್ಷ್ಮಣ ಸವದಿ -ಉತ್ತರಕನ್ನಡ

19 ಪ್ರಿಯಾಂಕ್ ಖರ್ಗೆ -ಕಲಬುರಗಿ

20 ಅಜಯ್ ಧರಂ ಸಿಂಗ್ -ರಾಯಚೂರು

21 ಈಶ್ವರ್ ಖಂಡ್ರೆ -ಬೀದರ್

22 ಯು.ಟಿ. ಖಾದರ್ -ದಕ್ಷಿಣ ಕನ್ನಡ & ಉಡುಪಿ

23 ಪಿ.ಎಂ. ನರೇಂದ್ರಸ್ವಾಮಿ -ಕೊಡಗು

24 ಯತೀಂದ್ರ ಸಿದ್ದರಾಮಯ್ಯ -ಮೈಸೂರು

25 ಚಲುವರಾಯಸ್ವಾಮಿ -ಮಂಡ್ಯ

26 ಪುಟ್ಟರಂಗಶೆಟ್ಟಿ -ಚಾಮರಾಜನಗರ

27 ಬಿ. ನಾಗೇಂದ್ರ -ಬಳ್ಳಾರಿ

28 ಶರಣ ಪ್ರಕಾಶ ಪಾಟೀಲ -ಯಾದಗಿರಿ

29 ಶಿವರಾಜ್ ಸಂಗಪ್ಪ ತಂಗಡಗಿ – ಕೊಪ್ಪಳ

30 ಕೃಷ್ಣ ಭೈರೇಗೌಡ -ಬೆಂಗಳೂರು ನಗರ

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted

ಇತ್ತೀಚಿನ ಸುದ್ದಿಗಳು