ಕಲಬುರಗಿಯಲ್ಲಿ ಭಕ್ತಿಭಾವದ ಲಹರಿ: ಪೂಜ್ಯ ಶ್ರೀ ಶರಣಬಸಪ್ಪ ಅಪ್ಪ ಅವರ ಪ್ರಥಮ ಪುಣ್ಯಸ್ಮರಣೆ, ಗಣ್ಯರು ಹಾಗೂ ಮಠಾಧೀಶರಿಂದ ನಮನ
**ಕಲಬುರಗಿಯಲ್ಲಿ ಭಕ್ತಿಭಾವದ ಲಹರಿ: ಪೂಜ್ಯ ಶ್ರೀ ಶರಣಬಸಪ್ಪ ಅಪ್ಪ ಅವರ ಪ್ರಥಮ ಪುಣ್ಯಸ್ಮರಣೆ, ಗಣ್ಯರು ಹಾಗೂ ಮಠಾಧೀಶರಿಂದ ನಮನ** **ವರದಿ: ಕನ್ನಡ ಸಾಮ್ರಾಟ್ ಡಿಜಿಟಲ್ ಡೆಸ್ಕ್, ಕಲಬುರಗಿ** **ಕಲಬುರಗಿ:** ಕಲ್ಯಾಣ ಕರ್ನಾಟಕದ ಅಕ್ಷರ ದಾಸೋಹಿ, ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಶರಣಬಸಪ್ಪ ಅಪ್ಪ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವು ನಗರದಲ್ಲಿ ಅತ್ಯಂತ ಭಕ್ತಿ ಹಾಗೂ ಭಾವಪೂರ್ಣ ವಾತಾವರಣದಲ್ಲಿ ಜರುಗಿತು. ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಅಪಾರ ಭಕ್ತಸ್ತೋಮ, ರಾಜಕೀಯ ಗಣ್ಯರು ಹಾಗೂ ಮಠಾಧೀಶರು ಪೂಜ್ಯರ ಸ್ಮರಣೆಗೆ ಶಿರಬಾಗಿ…