ಬಸವಕಲ್ಯಾಣ: ತೀವ್ರ ವಿರೋಧದ ನಡುವೆಯೂ ಕನ್ನೇರಿ ಸ್ವಾಮಿ ಉಪಸ್ಥಿತಿಯ ಹಿಂದೂ ಸಮಾವೇಶಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್!
ಕನ್ನಡ ಸಾಮ್ರಾಟ್ ಡಿಜಿಟಲ್ ಡೆಸ್ಕ್, ಕನ್ನೇರಿ ಸ್ವಾಮಿ ಜಿ ಮಾತಾಡುವಂತಿಲ್ಲ, ಆದ್ರೆ ಸಮಾವೇಶ ನಡೆಯಲಿದೆ: ಹೈಕೋರ್ಟ್ನಿಂದ ಕಠಿಣ ಷರತ್ತುಬದ್ಧ ಅನುಮತಿ – ಕನ್ನಡ ಸಾಮ್ರಾಟ್ ವಿಶೇಷ ವರದಿ ಬಸವಣ್ಣನವರ ಪವಿತ್ರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಇದೇ ಜೂನ್ 28ರಂದು ಆಯೋಜನೆಗೊಂಡಿರುವ ವಿವಾದಾತ್ಮಕ ‘ಹಿಂದೂ ಸಮಾವೇಶ’ಕ್ಕೆ ಕೊನೆಗೂ ಕಲಬುರಗಿ ಹೈಕೋರ್ಟ್ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಬಸವ ಸಂಘಟನೆಗಳ ತೀವ್ರ ವಿರೋಧ ಹಾಗೂ ಕಲ್ಯಾಣ ನಾಡಿನ ಭಕ್ತರ ಆಕ್ರೋಶದ ನಡುವೆಯೂ, ವಿವಾದಿತ ಕನ್ನೇರಿ ಸ್ವಾಮಿಗಳ ಉಪಸ್ಥಿತಿಯಲ್ಲಿಯೇ ಈ ಕಾರ್ಯಕ್ರಮ ನಡೆಯಲು…