ಚಿಂಚೋಳಿ: ಗ್ರಾ.ಪಂ.ಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಮುನ್ನ ಪೂರ್ವ ಭಾವಿ ಸಭೆ ಕರೆಯಲು; ಪರಿಶಿಷ್ಟ ಜಾತಿಯ ಬಲಗೈ ಸಮಾಜದ ವತಿಯಿಂದ ಅಧಿಕಾರಿಗಳಿಗೆ ಮನವಿ
ಕನ್ನಡ ಸಾಮ್ರಾಟ್ ನ್ಯೂಸ್, ಚಿಂಚೋಳಿ
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತೋತ್ಸವವನ್ನು ಕೇವಲ ತಾಲೂಕು ಕೇಂದ್ರಕ್ಕಷ್ಟೇ ಸೀಮಿತಗೊಳಿಸದೆ, ಹಳ್ಳಿ-ಹಳ್ಳಿಗಳಿಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಚಿಂಚೋಳಿ ತಾಲೂಕಿನಾದ್ಯಂತ ಬರುವ ಎಲ್ಲ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ಶೀಘ್ರವೇ ‘ಪೂರ್ವಭಾವಿ ಸಭೆ’ ಕರೆಯುವಂತೆ ಆಗ್ರಹಿಸಿ ಪ್ರ.ಕಾರ್ಯದರ್ಶಿ ಗೌತಮ್ ಬೊಮ್ಮನಳ್ಳಿ ಹಾಗೂ ಬಲಗೈ ಸಮಾಜದ ಗಣ್ಯರ ನೇತೃತ್ವದಲ್ಲಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ತಾಲೂಕು ಆಡಳಿತ ಸೌಧದಲ್ಲಿ ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಸಂತೋಷ್ ಚವ್ಹಾಣ್ ಅವರನ್ನು ಭೇಟಿಯಾದ ಬಲಗೈ ಸಮಾಜದ ಗಣ್ಯರ ನಿಯೋಗವು, ಬಾಬಾಸಾಹೇಬರ ಜಯಂತಿಯನ್ನು ವಿಜೃಂಭಣೆಯಿಂದ ಹಾಗೂ ಅಚ್ಚುಕಟ್ಟಾಗಿ ಆಚರಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿ, ಅಧಿಕೃತ ಮನವಿ ಪತ್ರವನ್ನು ಹಸ್ತಾಂತರಿಸಿತು.
ಗ್ರಾಮ ಮಟ್ಟದಲ್ಲಿ ಸಂವಿಧಾನದ ಅರಿವು:
ಗ್ರಾಮ ಮಟ್ಟದಲ್ಲಿ ಸಂವಿಧಾನದ ಅರಿವು ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಬಿತ್ತುವ ನಿಟ್ಟಿನಲ್ಲಿ ಗ್ರಾ.ಪಂ. ಮಟ್ಟದ ಆಚರಣೆ ಅತ್ಯಂತ ಪ್ರಮುಖವಾಗಿದೆ. ಯಾವುದೇ ಗೊಂದಲಗಳಿಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಯಂತೋತ್ಸವ ಆಚರಿಸಲು ಅನುವಾಗುವಂತೆ, ತಕ್ಷಣವೇ ಎಲ್ಲ ಪಿಡಿಒ (PDO) ಗಳಿಗೆ ಪೂರ್ವಭಾವಿ ಸಭೆ ಆಯೋಜಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಮುಖಂಡರು ಅಧಿಕಾರಿಗಳನ್ನು ಒತ್ತಾಯಿಸಿದರು.
ಉಪಸ್ಥಿತರಿದ್ದ ಪ್ರಮುಖರು:
ಮನವಿ ಸಲ್ಲಿಕೆ ವೇಳೆ ಸಮಾಜದ ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ನಿಯೋಗದಲ್ಲಿ ಪ್ರಮುಖವಾಗಿ:
- ರೇವಣಸಿದ್ಧಪ್ಪ ಸುಬೇದಾರ್ (ಸಂಚಾಲಕರು, ಬಲಗೈ ಸಮಾಜ)
- ಗೌತಮ್ ಬೊಮ್ಮನಳ್ಳಿ (ಪ್ರ. ಕಾ)
- ಆನಂದ್ ಟೈಗರ್ (ಪುರಸಭೆ ಮಾಜಿ ಅಧ್ಯಕ್ಷರು)
- ಸುನಿಲ್ ತ್ರಿಪಾಠಿ
- ಚೇತನ್ ನಿರಾಳಕರ್
- ವಿಶ್ವನಾಥ್ ವಾಲಿಕಾರ್
- ರಾಜಶೇಖರ್ ಹೊಸಮನಿ
- ಮಾರುತಿ ಕೊಳ್ಳರ್
- ದೇವೇಂದ್ರ ಕಟ್ಟಿಮನಿ
- ಬಸ್ಸಪ್ಪ ಹಿಂಡಿ
- ರಘು ಚಿಮ್ಮನಚೋಡ್
- ಓಮನ್ ರಾವ್ ಕೊರವಿ,
- ಮಲ್ಲಿಕಾರ್ಜುನ ಖೈತಪೂರ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.







