ಚಂದಾಪುರದ ಶಾರದಾ ಶಾಲೆಯಲ್ಲಿ ಸಡಗರದ 80ನೇ ಸ್ವಾತಂತ್ರ್ಯ ದಿನಾಚರಣೆ – ಪುಟಾಣಿಯ ತೊದಲು ನುಡಿಗೆ ರೋಮಾಂಚಿತರಾದ ಜನತೆ!
ಚಿಂಚೋಳಿ: ಪಟ್ಟಣದ ಚಂದಾಪುರದಲ್ಲಿರುವ ಶಾರದಾ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ತ್ರಿವರ್ಣ ಧ್ವಜದ ಹಾರಾಟದೊಂದಿಗೆ ಮೊಳಗಿದ ದೇಶಭಕ್ತಿಯ ಘೋಷಣೆಗಳು ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬದ ಕಳೆ ತಂದಿದ್ದವು.
ವೀರ ಮಹನೀಯರ ತ್ಯಾಗವೇ ಇಂದಿನ ಸ್ವಾತಂತ್ರ್ಯ
ಧ್ವಜಾರೋಹಣ ನೆರವೇರಿಸಿದ ಕನ್ನಡ ಸಾಮ್ರಾಟ್ news portal ನ ಸಂಪಾದಕರಾದ ಶಿವಬಸ್ಸಯ್ಯ ಎಸ್ ಹಾಗೂ ಡಿಎಸ್ಎಸ್ ತಾಲೂಕು ಸಂಚಾಲಕರಾದ ರಾಜಶೇಖರ್ ಹೊಸಮನಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಅವರು ನೆರೆದಿದ್ದವರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದರು.
”ಭಾರತೀಯರೆಂದು ಹೇಳಿಕೊಳ್ಳುವುದು ನಮ್ಮೆಲ್ಲರ ಹೆಮ್ಮೆಯ ಪ್ರತೀಕ. ಸುಮಾರು 200ಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟಿಷರ ಕಪಿಮುಷ್ಠಿಯಿಂದ 1947ರ ಆಗಸ್ಟ್ 15ರಂದು ನಾವು ವಿಮೋಚನೆ ಹೊಂದಿದೆವು. ಅಸಂಖ್ಯಾತ ವೀರ ಮಹನೀಯರ ಬಲಿದಾನ ಹಾಗೂ ಪ್ರಾಣತ್ಯಾಗದ ಪ್ರತಿಫಲವಾಗಿ ಇಂದು ನಾವೆಲ್ಲರೂ ಈ ಮುಕ್ತ ಗಾಳಿಯನ್ನು ಉಸಿರಾಡುತ್ತಿದ್ದೇವೆ. ಆ ಮಹನೀಯರ ತ್ಯಾಗವನ್ನು ನಾವೆಂದೂ ಮರೆಯಬಾರದು,” ಎಂದು ಅವರು ಸ್ಮರಿಸಿದರು.
ಒಗ್ಗಟ್ಟಿನಿಂದ ಮುನ್ನಡೆದರೆ ವಿಶ್ವಗುರುವಾಗಲಿದೆ ಭಾರತ
ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ‘ಕನ್ನಡ ಸಾಮ್ರಾಟ್’ ಪತ್ರಿಕೆಯ ಸಂಪಾದಕರಾದ ಶಿವಬಸಯ್ಯಸ್ವಾಮಿ ಅವರು ಪ್ರತಿಯೊಬ್ಬರ ಜವಾಬ್ದಾರಿಯ ಬಗ್ಗೆ ಎಚ್ಚರಿಸಿದರು.
”ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸಾವಿರಾರು ದೇಶಪ್ರೇಮಿಗಳು ನಮಗಾಗಿ ಹುತಾತ್ಮರಾಗಿದ್ದಾರೆ. ಅವರ ನಿರಂತರ ಹೋರಾಟದ ಫಲವೇ ಈ ಸುಂದರ ಸ್ವಾತಂತ್ರ್ಯ. ಇಂದು ನಾವೆಲ್ಲರೂ ಒಗ್ಗಟ್ಟಿನಿಂದ ಹೆಜ್ಜೆ ಹಾಕಿದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೇರಿಸಬಹುದು. ಇದು ಕೇವಲ ಸರ್ಕಾರದ ಕೆಲಸವಲ್ಲ, ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ,” ಎಂದು ಮಾರ್ಮಿಕವಾಗಿ ನುಡಿದರು.
🌟 ವಿಶೇಷ ಆಕರ್ಷಣೆ: ಕಂದಮ್ಮನ ತೊದಲು ನುಡಿಗೆ ಕರಗಿದ ಮನಸುಗಳು
ಕಾರ್ಯಕ್ರಮದ ಬಹುದೊಡ್ಡ ಹೈಲೈಟ್ ಎಂದರೆ ಕೇವಲ ನಾಲ್ಕು ವರ್ಷದ ಪುಟಾಣಿಯೊಬ್ಬ ಆಡಿದ ಭಾಷಣ. ಎಳೆಯ ವಯಸ್ಸಿನಲ್ಲೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಆ ಮಗು ಹೇಳಿದ ತೊದಲು ನುಡಿಯ ಮಾತುಗಳು ನೆರೆದಿದ್ದ ಕೇಳುಗರಲ್ಲಿ ರೋಮಾಂಚನ ಮೂಡಿಸಿತಲ್ಲದೆ, ಇಡೀ ಶಾಲಾ ಆವರಣ ಕರತಾಡನದಿಂದ ಮೊಳಗುವಂತೆ ಮಾಡಿತು.
ಗಣ್ಯರ ಉಪಸ್ಥಿತಿ:
ಈ ರಾಷ್ಟ್ರೀಯ ಹಬ್ಬದ ಸಂಭ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ರಾಜೇಂದ್ರಪ್ರಸಾದ್, ಶಿಕ್ಷಕ ವೃಂದದವರಾದ ಸಿದ್ದಿಕ, ಅಪರಂಜಿ, ಸುಷ್ಮಾ, ರೋಹಿಣಿ, ಹಾಗೂ ನೂರಾರು ವಿದ್ಯಾರ್ಥಿಗಳ ಪೋಷಕರು ಮತ್ತು ಶಾಲೆಯ ಮುದ್ದು ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.
– ವರದಿ: ನಿಮ್ಮ ನೆಚ್ಚಿನ ಕನ್ನಡ ಸಾಮ್ರಾಟ್ 






