Home » ಕಲಬುರಗಿ » ಚಿಂಚೋಳಿ » ಪೂಜ್ಯ ಶಿವಶರಣ ಮಾದರ ಚೆನ್ನಯ್ಯರವರ 975 ನೇ ಜಯಂತಿ ಆಚರಣೆ

ಪೂಜ್ಯ ಶಿವಶರಣ ಮಾದರ ಚೆನ್ನಯ್ಯರವರ 975 ನೇ ಜಯಂತಿ ಆಚರಣೆ

ಪೂಜ್ಯ ಶಿವಶರಣ ಮಾದರ ಚೆನ್ನಯ್ಯರವರ 975 ನೇ ಜಯಂತಿ ಆಚರಣೆ

ದಿನಾಂಕ 26.01.2026 ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಡಾII ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ಪೂಜ್ಯ ಶಿವಶರಣ ಮಾದರ ಚೆನ್ನಯ್ಯರವರ 975 ನೇ ಜಯಂತಿ ಆಚರಣೆ ಮಾಡಲಾಯಿತು, ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಶರಣಗೌಡ ಪಾಟೀಲ್ ಶ್ರೀ ಮಾದಾರ ಚೆನ್ನಯ್ಯ ಇವರು 12 ನೇಯ ಶತಮಾನದಲ್ಲಿ ಅಣ್ಣ ಬಸವಣ್ಣನವರ ಸಮಕಾಲೀನರು ಶರಣರಲ್ಲಿ ಇವರು ಕೂಡ ಒಬ್ಬ ಶ್ರೇಷ್ಠ ವಚನಕಾರ ಎಂದು ಸ್ಮರಿಸಿದರು, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮತ್ತೊರ್ವ ಊರಿನ ಮುಖಂಡರಾದ ಶ್ರೀ ದತ್ತಾತ್ರೇಯ ಬಿ ರಾಯಗೋಳ ಇವರು ಶ್ರೀ ಮಾದಾರ ಚೆನ್ನಯ್ಯ ಉತ್ತಮ ವಚನಕಾರರೂ ಆಗಿದ್ದು, ಇವರಲ್ಲಿ ವೀರಶೈವ ತತ್ವ ಬೋಧನೆ ಕಂಡು ಬರುತ್ತದೆ ಎಂದು ಸ್ಮರಿಸಿದರು, ಇವರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ಹಾಗೂ ಇವರು ಜನಿಸಿದ ದಿನದಂದೆ ಆಚರಣೆ ಮಾಡಿದರೆ ಚೆನ್ನಾಗಿತ್ತು ಎಂದು ಕಿವಿಮಾತು ಹೇಳಿದರು, ಇನ್ನೋರ್ವ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ ಸಿರಂಜಿ ಅತಿಥಿಗಳಾಗಿ ಆಗಮಿಸಿ ಶಿವಶರಣ ಮಾದರ ಚೆನ್ನಯ್ಯರವರ ಜಯಂತಿ ಆಚರಣೆ ಬಗ್ಗೆ ನನಗೆ ಬಹಳ ಖುಷಿಯಾಗಿದೆ, ಮೆರವಣಿಗೆಯೊಂದಿಗೆ ಮಾಡಿದರೆ ಚೆನ್ನಾಗಿರುತ್ತದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಜಗದೀಶ್ ಗೌಡ ಇವರು ಇಂತಹ ಮಹಾನ್ ಶರಣರ ಜಯಂತಿಗಳಿಗೆ ನಮ್ಮ ಸಹಾಯ ಸಹಕಾರ ಇರುತ್ತದೆ ಎಂದು ಹೇಳಿದರು, ಪಡಶೆಟ್ಟಿ ಯವರು ಮಾತನಾಡಿ ಇಂತಹ ಮಹಾನ್ ಶರಣರ ಜಯಂತಿಗಳು ಆಚರಣೆ ಮಾಡುವುದರೊಂದಿಗೆ ನಾವು ಒಗ್ಗಟ್ಟಾಗಿ ಬಾಳಬೇಕು ಎಂದು ಹೇಳಿದರು, ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಸಮಾಜದ ಯುವ ಮುಖಂಡರಾದ ಶ್ರೀ ಹಣಮಂತ ಪಂಗರಗಾ ಇವರು ಮಾದರ ಚೆನ್ನಯ್ಯ ರವರು ಬೆಳೆದು ಬಂದ ಹಾದಿ ಹಿಡಿದು ಚೋಳರಾಜ ಚೆನ್ನಯ್ಯನ ಕಾಲಿಗೆರೆದು ಕೆಳವರ್ಗದವರಲ್ಲಿ ನೀವು ಶ್ರೇಷ್ಠ ಕುಲದವರು ನನಗೆ ಜ್ಞಾನೋದಯವಾಯಿತು ಎಂದು ಹೇಳಿದ ಚೋಳ ರಾಜನ ಮತ್ತು ಚೆನ್ನಯ್ಯನ ಕುರಿತು ಸವಿಸ್ತಾರವಾಗಿ ಮಾತನಾಡಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಜಗದೀಶ್ ಗೌಡ, ಕಮಲಾಕರ್ ಕಡಗದ, ಮತ್ತು ಡಾII ಬಾಬು ಜಗಜೀವನ್ ರಾಮ್ ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶ ಸಂಘದ ಅಧ್ಯಕ್ಷರು, ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿಯವರು, ಸಹಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಹಾಗೂ ಸದಸ್ಯರು ಮತ್ತು ಸಮಾಜದ ಹಿರಿಯರು, ಯುವಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಗೌರವಾನ್ವಿತ ಅತಿಥಿಗಳಿಗೆ ಮತ್ತು ಗ್ರಾಮದ ಮುಖಂಡರಿಗೆ ಡಾII ಬಾಬು ಜಗಜೀವನ್ ರಾಮ್ ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶ ಸಂಘದ ಅಧ್ಯಕ್ಷರಾದ ಶ್ರೀ ಗಿನ್ನಪ್ಪ ಬಿ ತಿಮ್ಮಪೂರ ಇವರು ಸನ್ಮಾನಿಸಿ ಗೌರವಿಸಿ ಪ್ರತೇಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಹೇಳಿದರು, ಸದರಿ ಕಾರ್ಯಕ್ರಮವು

ಶ್ರೀ ತುಕಾರಾಮ ಜಿ ಬಸಂತಪೂರ ಇವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು, ಶ್ರೀ ಪುಂಡಲೀಕ ಎಮ್ ಬಸಂತಪೂರ ಇವರು ಕೊನೆಯಲ್ಲಿ ವಂದಿಸಿದರು.

ಕನ್ನಡ ಸಾಮ್ರಾಟ್ news

4 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು