Home » ನ್ಯೂಸ್ » ರಾಜ್ಯ » ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಓಬಿಸಿ ಮೋರ್ಚಾದಿಂದ ವಿನೂತನ ಪ್ರತಿಭಟನೆ: ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಎಚ್ಚರಿಕೆ (Innovative protest by BJP OBC Morcha in front of DC office: Warning to teach the government a lesson)

ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಓಬಿಸಿ ಮೋರ್ಚಾದಿಂದ ವಿನೂತನ ಪ್ರತಿಭಟನೆ: ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಎಚ್ಚರಿಕೆ (Innovative protest by BJP OBC Morcha in front of DC office: Warning to teach the government a lesson)

ಪಂಚಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತವಾಗಿದ್ದು, ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ವಿನೂತನ ಹೋರಾಟದ ಮೂಲಕ ಎಚ್ಚರಿಸುತ್ತಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ನಿರ್ದೇಶನ ನೀಡಲು ತಮಲ್ಲಿ ಮನವಿ.
ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಜನಹಿತದ ಹೆಸರಿನಲ್ಲಿ ‘ಪಂಚ ‘ಗ್ಯಾರಂಟಿ’ ಯೋಜನೆ ಜಾರಿಗೊಳಿಸಿ, ವಾಸ್ತವದಲ್ಲಿ ರಾಜಕೀಯ ಲಾಭ ಮತ್ತು ಮತ ಬ್ಯಾಂಕ್ ರಾಜಕಾರಣ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ತಮ್ಮ ಖುರ್ಚಿ ಕಚ್ಚಾಟದಲ್ಲಿ ರಾಜ್ಯದ ಅಭಿವೃದ್ಧಿಯನ್ನೆ ಮರೆತಿದೆ.

ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ ಮತ್ತು ಅನ್ನ ಭಾಗ್ಯ ದಿವಾಳಿತನದತ್ತ ಯೋಜನೆಗಳ ಮೂಲಕ ಜನರನ್ನು ಮರುಳುಗೊಳಿಸಿ. ರಾಜ್ಯವನ್ನು ಕೊಂಡೊಯ್ಯುತ್ತಿರುವುದನ್ನು ವಿರೋಧ ಪಕ್ಷವಾಗಿ ನಾವು ತೀವ್ರವಾಗಿ ಖಂಡಿಸುತ್ತೇವೆ.

ಈ ಯೋಜನೆಗಳು ಅಭಿವೃದ್ಧಿಯ ಪ್ರತೀಕವಲ್ಲ; ಇವು ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಹಾಕುವ ಮತಬ್ಯಾಂಕ್ ರಾಜಕಾರಣದ ಸಾಧನಗಳು: ಉದ್ಯೋಗ ನೀಡಲು ಅಸಮರ್ಥವಾದ ಸರ್ಕಾರ, ಉಚಿತಗಳ ಮೂಲಕ ಯುವಕರನ್ನು ನಿಷ್ಕ್ರಿಯರನ್ನಾಗಿಸುತ್ತಿದೆ. ಕೈಗಾರಿಕೆ, ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಸಂಪೂರ್ಣವಾಗಿ ನಿರ್ಲಕ್ಷ್ಯಗೊಂಡಿದೆ. ಇದರಿಂದಾಗಿ ಹಿಂದುಳಿದ ವರ್ಗ, ದುಡಿಯುವ ವರ್ಗಕ್ಕೆ ಆರ್ಥಿಕವಾಗಿ ಬಹಳ ಪೆಟ್ಟು ಬಿದ್ದಿದೆ.

ಈ ಯೋಜನೆಗಳು ರಾಜ್ಯದ ಆರ್ಥಿಕ ಶಿಸ್ತನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತಿದ್ದು, ದುಡಿಯುವ ನಾಗರಿಕರನ್ನು ದಂಡಿಸಿ, ದುಡಿತವಿಲ್ಲದ ಅವಲಂಬನ ಸಂಸ್ಕೃತಿಯನ್ನು ಬೆಳೆಸುತ್ತಿವೆ. ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಉಚಿತ ಯೋಜನೆಗಳನ್ನು ಉಪಯೋಗಿಸುವುದು ಅಸಮರ್ಥ ಆಡಳಿತದ ಲಕ್ಷಣವಾಗಿದೆ.

ರಾಜ್ಯ ಸಾಲದ ಹೊರೆ ದಿನೇದಿನೇ ಹೆಚ್ಚಾಗುತ್ತಿದ್ದರೂ, ಸರ್ಕಾರಕ್ಕೆ ಯಾವುದೇ ಆರ್ಥಿಕ ಶಿಸ್ತು ಕಾಣಿಸುತ್ತಿಲ್ಲ. ತೆರಿಗೆದಾರರ ಹಣವನ್ನು ಅಯೋಗ್ಯವಾಗಿ ಬಳಸಿ. ಮುಂದಿನ ಪೀಳಿಗೆಗಳ ಮೇಲೆ ಭಾರ ಹಾಕುತ್ತಿರುವುದು ಅಕ್ಷಮ್ಯ ಅಪರಾಥವಾಗಿದೆ.
1ನೇ ಪುಟದಿಂದ

ಉದ್ಯೋಗ ಸೃಷ್ಟಿ, ಕೈಗಾರಿಕಾ ಬೆಳವಣಿಗೆ, ರೈತ ಮತ್ತು ಯುವಕರ ಶಾಶ್ವತ ಆದಾಯ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಭಿವೃದ್ಧಿ ರಾಜಕಾರಣದ ಬದಲು ಉಚಿತ ರಾಜಕಾರಣವನ್ನು ಆಯ್ಕೆ ಮಾಡಿಕೊಂಡಿರುವುದು ರಾಜ್ಯದ ಭವಿಷ್ಯವನ್ನು ತಲೆಕೆಳಗಾಗಿಸುವ ನಿರ್ಧಾರವಾಗಿದೆ ಎನ್ನವುದು ಸ್ಪಷ್ಟವಾಗಿ ಕಾಣುತ್ತಿದೆ.

ಈ ಯೋಜನೆಗಳನ್ನು ಮರುಪರಿಶೀಲಿಸದೆ ಮುಂದುವರಿದರೆ, ರಾಜ್ಯಕ್ಕೆ ಗಂಭೀರ ಆರ್ಥಿಕ ಮತ್ತು ಸಾಮಾಜಿಕ ಹಾನಿ ಉಂಟಾಗಲಿದೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿಗೆ ಐದು ಸಾವಿರ ಕೋಟಿ ರೂ. (ರೂ. 5000 ಕೋಟಿ) ಆರ್ಥಿಕ ಸಹಾಯವನ್ನು ನೀಡಲಾಗುತ್ತಿದೆ. ಕೇವಲ ಇನ್ನೇರಡು ತಿಂಗಳಲ್ಲಿ ಆ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು ಎಂದು ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ. ಎನ್ನುವುದು ಮಾಧ್ಯಮಗಳ ಮುಖಾಂತರ ತಿಳಿದು ಬಂದಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಅಭಿವೃದ್ಧಿ ಎನ್ನುವುದು ಮರಿಚಿಕೆಯಾಗಿದೆ. ಆದರೆ ಎರಡೇ ತಿಂಗಳಲ್ಲಿ ಸಂಪೂರ್ಣ ಹಣ ಖುರ್ಚು ಮಾಡಿ ಅಭಿವೃದ್ಧಿ ಹೇಗೆ ಮಾಡುತ್ತಾರೆ? ಎನ್ನುವುದು ಪ್ರಶ್ನೆಯಾಗಿದೆ.

ಕಲಬುರಗಿ ನಗರದಲ್ಲಿ ಮುಖ್ಯ ರಸ್ತೆಯಿಂದ ಹಿಡಿದು ಎಲ್ಲಾ ರಸ್ತೆಗಳು ಕೆಟ್ಟು ಹಾಳಾಗಿವೆ. ಅವುಗಳ ದುರಸ್ಥಿಗಾಗಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ಉದ್ಘಾಟನೆಗೆ ಮಾತ್ರ ಸೀಮಿತವಾಗಿದ್ದಾರೆ. ಆಡಳಿತ ಪಕ್ಷದಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಸದಾ ವಿರೋಧ ಪಕ್ಷಗಳಿಗೆ ನಿಂಧಿಸುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಎನ್ನುವದು ಮತದಾರರ ಆರೋಪವಾಗಿದೆ.
ಭಾರತೀಯ ಜನತಾ ಪಕ್ಷದ ಕಲಬುರಗಿ ನಗರ ಓಬಿಸಿ ಮೋರ್ಚಾವು ವಿರೋಧ ಪಕ್ಷವಾಗಿ ನಾವು ಸ್ಪಷ್ಟವಾಗಿ ಎಚ್ಚರಿಸುತ್ತೇವೆ, ಈ ಜನವಂಚಕ ಯೋಜನೆಗಳನ್ನು ತಕ್ಷಣ ನಿಲ್ಲಿಸಬೇಕು, ಅಭಿವೃದ್ಧಿ ಕೇಂದ್ರಿತ ಆಡಳಿತಕ್ಕೆ ಮರಳಬೇಕು. ನಿಮ್ಮ ಖುರ್ಚಿ ಕಳ್ಳಾಟವನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಅಸಮರ್ಥ ಮತ್ತು ದುರಾಡಳಿತ ಸರ್ಕಾರಕ್ಕೆ ರಾಜಕೀಯವಾಗಿ ತಕ್ಕ ಪಾಠ ಕಲಿಸುವುದು ಖಚಿತ ಎಂದು ಈ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎನ್ನುವುದನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಭಿಷೇಕ
ಬಿ.ಜೆ.ಪಿ. ಓ.ಬಿ.ಸಿ ಪ್ರಧಾನ ಕಾರ್ಯದರ್ಶಿ
ದೇವಿಂದ್ರ ದೇಸಾಯಿ ಕಲ್ಲೂರ. ಬಿ.ಜೆ.ಪಿ. ಓ.ಬಿ.ಸಿ ನಗರಾಧ್ಯಕ್ಷರು,
ಶಶಿ ಮದ್ದೂರು ರಾಮೋಜಿ ಜ್ಯೋತಿಬಾ ಸಂಗು, ಲೋಕೇಶ್, ರಾಕೇಶ್ ಮಾಡ್ಯಾಳ, ಶಿವಾನಂದ ಕಲ್ಲೂರ್, ಕಮಲಾಕಾರ್ ಅಣ್ಣಾಕಲ್, ಸಿದ್ದು ಬುಸನೂರ್, ನಾಗು ಹತ್ತಗುಂದಿ, ಶಿವರಾಜ್, ಮಲ್ಲು ಪೋದರ್ ಅನೇಕರು ಈ ಪ್ರತಿಭಟನೆಯಲ್ಲಿ ಉಪಸ್ತರಿದ್ದರು.

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು