Home » ನ್ಯೂಸ್ » Kalaburgi » ಮಂತ್ರಿಗಾಗಿ ದೇವರ ಮೊರೆ ಹೋದ ಅಜಯ್ ಸಿಂಗ್ ಅಭಿಮಾನಿ :ಉದಯ್ ಪಾಟೀಲ್*

ಮಂತ್ರಿಗಾಗಿ ದೇವರ ಮೊರೆ ಹೋದ ಅಜಯ್ ಸಿಂಗ್ ಅಭಿಮಾನಿ :ಉದಯ್ ಪಾಟೀಲ್*

*ಮಂತ್ರಿಗಾಗಿ ದೇವರ ಮೊರೆ ಹೋದ ಅಜಯ್ ಸಿಂಗ್ ಅಭಿಮಾನಿ :ಉದಯ್ ಪಾಟೀಲ್*

ಕಲಬುರಗಿ:ಇಂದು ಕೋರಂಟಿ ಹನುಮಾನ ದೇವಸ್ಥಾನದಲ್ಲಿ ಡಾ. ಅಜಯ್ ಧರ್ಮಸಿಂಗ್ ಅವರನ್ನು ಬರುವ ಸಚಿವ ಸಂಪುಟದಲ್ಲಿ ಕ್ಯಾಬಿನೇಟ್ ದರ್ಜೆಯ ಮಂತ್ರಿ ಸ್ಥಾನವನ್ನು ನೀಡಬೇಕೆಂದು ವಿಶೇಷ ಸಂಕಲ್ಪ ಪೂಜೆಯನ್ನು ಅಜಯ್ ಸಿಂಗ್ ಅಭಿಮಾನಿ ಉದಯ್ ಪಾಟೀಲ ನೇತ್ರತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಸಂಕಲ್ಪ ಪೂಜೆ ನೇರೆವರಿಸಿ ನಂತರ ಮಾತನಾಡಿದ ಉದಯ್ ಪಾಟೀಲ್, ಸತತ ವಾಗಿ ಜೇವರ್ಗಿ ಮತಕ್ಷೇತ್ರದಿಂದ ಮೂರು ಭಾರಿ ಶಾಸಕರಾಗಿ ಸುಮಾರು ಜನಪರ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದು ಕಲ್ಯಾಣ ಕರ್ನಾಟಕ ಅಭಿವೃದ್ದಿಯನ್ನು ಮಾಡಿದ್ದಾರೆ. ಅಲ್ದೇ
ಇಲ್ಲಿಯವರೆಗೆ ಯಾವುದೇ ಕಳಂಕವಿಲ್ಲದೇ ತಮ್ಮ ಅಧಿಕಾರವನ್ನು ಯಶಸ್ವಿ ಯಾಗಿ ನಿಭಾಯಿಸಿಕೊಂಡು ಬಂದಿರುತ್ತಾರೆ. ಅಷ್ಟೇ ಅಲ್ಲದೇ ಜೇವರ್ಗಿ ಮತಕ್ಷೇತ್ರಕ್ಕೆ ತಮ್ಮದ ಆದ ವಿಶೇಷ ಕೊಡುಗೆಯನ್ನು ಕೊಟ್ಟಿದ್ದಾರೆ.

ಉಚಿತ ಕಲ್ಯಾಣ ಮಂಟಪ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆ್ಯಂಬುಲೆನ್ಸ್ ಸೇವೆ , ಯಡ್ರಾಮಿಯಲ್ಲಿ ಸುವರ್ಣ ಸೌಧಕ್ಕೆ 5 ಎಕರೆ ಜಮೀನು , ವೈಕುಂಠ ಯಾತ್ರೆಗೆ ವಾಹನ ಹೀಗೆ ನೂರಾರು ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಮೇಲೆ ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ, ಅರಣ್ಯ ಆವಿಷ್ಕಾರ, ಉದ್ಯೋಗ ಆವಿಷ್ಕಾರ ಸೇರೆದಂತೆ ಅನೇಕ ಜನಪರ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಹಾಗಾಗಿ ಈ ಭಾರಿ ಡಾ. ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಜ್ಯ ಮತ್ತು ರಾಷ್ಟ್ರದ ಕಾಂಗ್ರಸ್ ಹೈಕಮಾಂಡ್ ಗೆ ಕಳಕಳಿಯ ಮನವಿ ಮಾಡಿದರು.

 

ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ರಾಜ್ಯಧ್ಯಕ್ಷ ಉದಯ್ ಪಾಟೀಲ್, ದೀಪಕ್ ಬಬಲಾದ ಕರ್, ಸತೀಶ ಸಾಹುಕಾರ್ ತೆಗ್ಗಿನಮನಿ, ಸಚೀನ ನಾಯಕ್, ಜಗು ಹೊಸಮನಿ, ಮಲ್ಲಿಕಾರ್ಜುನ ಪಾಟೀಲ್, ಪ್ರಶಾಂತ ಹೊಸಮನಿ, ವೀಋಶ ಹುಲಿ, ಅಲೋಕ್ ಸೇರಿದಂತೆ ಅನೇಕ ಅಜಯ್ ಸಿಂಗ್ ಅಭಿಮಾನಿಬಳಗದ ಸದಸ್ಯರು ಉಪಸ್ಥಿತರಿದ್ದರು.

 

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು