ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ೮೮ ಆದರ್ಶ ಉಪಾಧ್ಯಾಯರ ಪ್ರಶಸ್ತಿ ಪ್ರದಾನ ಸಮಾರಂಭ ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿ ಪರ ಸಂಘದ ರಾಜ್ಯ
ಹಾಗೂ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ೮೮ ಆದರ್ಶ ಉಪಾಧ್ಯಾಯರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿ ಮಾತನಾಡಿ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ದೇಶಕ್ಕೆ ಸ್ವಾತಂತ್ರ‍್ಯ ಬಂದಾಗ ಬಡತನ ಕಾಡುತ್ತಿತ್ತು. ೭೫ ವರ್ಷಗಳಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ. ಇಡೀ ವಿಶ್ವಕ್ಕೆ ಎಂಜಿನಿಯರ್‌ಗಳು, ವೈದ್ಯರನ್ನು ಒದಗಿಸುತ್ತಿದೆ. ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತಿದೆ. ಈ ಎಲ್ಲ ಬದಲಾವಣೆಗೆ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರ ಶ್ರಮ ಮೂಲ ಕಾರಣ ಎಂದರು.
ದೇಶ ಸ್ವತಂತ್ರ ಗೊಂಡ ಬಳಿಕ ಡಾ. ಅಂಬೇಡ್ಕರ್ ಉತ್ತಮ ಸಂವಿಧಾನ ಕೊಟ್ಟ ಫಲವಾಗಿ ಸ್ತ್ರೀ ಸಮಾನತೆ, ಹಕ್ಕುಗಳು ಸೇರಿ ಹಲವು ಸುಧಾರಣೆಗಳು ಸಾಧ್ಯವಾಗುತ್ತಿವೆ. ಅಂಬೇಡ್ಕರ್ ಅವರಿಗೂ ಶಿಕ್ಷಣ ಸಿಕ್ಕಿದ್ದರಿಂದಲೇ ಇಂತಹ ಸಂವಿಧಾನ ಕೊಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
೮೮ ಶಿಕ್ಷಕರಿಗೆ ಆದರ್ಶ ಉಪಾಧ್ಯಾಯರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪೂರ್ವ ಪ್ರಾಥಮಿಕ ವಿಭಾಗ-೧೨, ಪ್ರಾಥಮಿಕ-೩೭, ಪ್ರೌಢಶಾಲಾ ವಿಭಾಗ-೧೫, ಪದವಿಪೂರ್ವ ಮತ್ತು ಪದವಿ ವಿಭಾಗ-೧೫, ತಾಂತ್ರಿಕ ವಿಭಾಗ-೨ ಮತ್ತು ವಿಶೇಷ ಪ್ರಶಸ್ತಿ ವಿಭಾಗದಲ್ಲಿ ೭ ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಡಿಡಿಪಿಐ ಸೂರ್ಯಕಾಂತ ಮದಾನೆ, ಡಿಎಚ್ ಒ ಡಾ.ಶರಣಬಸಪ್ಪ ಕ್ಯಾತನಾಳ, ಎನ್‌ಎಚ್‌ಎಐ ಕಾರ್ಯನಿರ್ವಾಹಕ ಎಂಜಿನಿಯರ್ ಮಹ್ಮದ್ ಇಬ್ರಾಹಿಂ ಕುಪನೂರ, ಚಿತ್ತಾಪುರದ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಿ. ಚಿಂಚನಸೂರ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಶರಣಗೌಡ ನಾಗಶೆಟ್ಟಿ, ಸವಿತಾ ನಾಶಿ, ಮಹಾನಂದ ನಾಗಶೆಟ್ಟಿ, ನಿವೃತ್ತ ಅಧಿಕಾರಿ ರಾಮರೆಡ್ಡಿ ಎನ್.ಸಂಪಾತೆ, ವೆಂಕಟರೆಡ್ಡಿ ಸಿ.ಕರಡ್ಡಿ, ಝಾಕೀರ್ ಹುಸೇನ್ ಕುಪನೂರ ಸೇರಿದಂತೆ ಇತರರಿದ್ದರು.