Home » ಕಲಬುರಗಿ » ಚಿಂಚೋಳಿ » ಚಿಂಚೋಳಿಯಲ್ಲಿ 893ನೇ ಬಸವ ಜಯಂತ್ಯೋತ್ಸವ; ಕಾಯಕ ತತ್ವದ ಮಹತ್ವ ಸಾರಿದ ಸಂಸದ ಸಾಗರ ಖಂಡ್ರೆ

ಚಿಂಚೋಳಿಯಲ್ಲಿ 893ನೇ ಬಸವ ಜಯಂತ್ಯೋತ್ಸವ; ಕಾಯಕ ತತ್ವದ ಮಹತ್ವ ಸಾರಿದ ಸಂಸದ ಸಾಗರ ಖಂಡ್ರೆ 

ಚಿಂಚೋಳಿಯಲ್ಲಿ 893ನೇ ಬಸವ ಜಯಂತ್ಯೋತ್ಸವ; ಕಾಯಕ ತತ್ವದ ಮಹತ್ವ ಸಾರಿದ ಸಂಸದ ಸಾಗರ ಖಂಡ್ರೆ

 

ಚಿಂಚೋಳಿ: ಇಂದಿನ ಆಧುನಿಕ ಸಮಾಜದಲ್ಲಿ ಯುವಕರು ಸಾಮಾಜಿಕ ಜಾಲತಾಣ, ಆನಲೈನ್ ಗೇಮ್, ಬೆಟ್ಟಿಂಗ್ ನಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜೀವನದಲ್ಲಿನ ತಮ್ಮ ಅಮೂಲ್ಯವಾದ ಯೌವ್ವನವನ್ನು ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಬದಿಗೊತ್ತಿ ಬಸವಣ್ಣನವರು ಪ್ರತಿಪಾದಿಸಿದ ” ಕಾಯಕವೇ ಕೈಲಾಸ ” ತತ್ವವನ್ನು ಅಳವಡಿಸಿಕೊಳ್ಳಬೇಕು. ಮನುಷ್ಯನ ಜೀವನ ಸಾರ್ಥಕವಾಗುವುದೇ ಕಾಯಕದಿಂದ. ಜನ ಮೆಚ್ಚುವುದು ಕಾಯಕಕ್ಕೇನೆ ಹೊರತು ಇನ್ನಿತರ ಯಾವುದಕ್ಕೋ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲೆಯ ಚಿಂಚೋಳಿಯ ಶ್ರೀ ಚನ್ನ ಕಲ್ಯಾಣ ಮಂಟಪದಲ್ಲಿ ಜಯಂತೋತ್ಸವದ ಅಧ್ಯಕ್ಷ ವಿರೇಶ ಯಂಪಳ್ಳಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 893 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದ ಅವರು, ಬಸವಣ್ಣನನ್ನು ಕೇವಲ ಜಯಂತಿಗೆ ಮಾತ್ರ ಸೀಮಿತಗೊಳಿಸದೇ ವರ್ಷಪೂರ್ತಿ ಅವರ ಆದರ್ಶಗಳನ್ನು ಪಾಲಿಸಬೇಕೆಂದರು. ಬಳಿಕ ಸೇಡಂ ಮತಕ್ಷೇತ್ರದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಮಾತನಾಡಿ, ನಡೆ-ನುಡಿ, ಆಚಾರ-ವಿಚಾರ ಒಂದಾದವನೇ ಶರಣ. ನಾವು ಆಡುವ ಮಾತುಗಳಿಗೂ ಆಚರಣೆಗಳಿಗೂ ಸಂಬಂಧವಿಲ್ಲದಂತೀರಬಾರದು, ಶಿವಾಚಾರ್ಯರು ಹಾಗೂ ವೀರಕ್ತರು ಇವರಿಬ್ಬರು ಒಂದಾಗಿ ಸಾಗಿದಾಗ ಮಾತ್ರ ವೀರಶೈವ ಲಿಂಗಾಯತ ಸಮಾಜ ಬಲಿಷ್ಠಗೊಳ್ಳುತ್ತದೆ ಎಂದರು. ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ವಿಶೇಷ ಸ್ಥಾನಮಾನವನ್ನು ಕಲ್ಪಿಸಿದ್ದರು.ಅದರಂತೆಯೇ ನಾವುಗಳು ಕೂಡ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಬೇಕು.ಅದರಂತೆಯೇ ಸಂವಿಧಾನ ಶಿಲ್ಪಿ ಅಂಬೇಡ್ಕರರು ನಮ್ಮ ಸಂವಿಧಾನದ ಮೂಲಕ ಮಹಿಳೆಯರಿಗೂ ಕೂಡ ವಿಶೇಷ ಸ್ಥಾನಮಾನವನ್ನು, ಮೀಸಲಾತಿಯನ್ನು ಕಲ್ಪಿಸಿದರು ಎಂದರು.ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಸುಭಾಶ ರಾಠೋಡ ಮಾತನಾಡಿ ಬಸವಣ್ಣನವರ ವಚನಗಳು ಸಾಮಾಜಿಕ ಬದಲಾವಣೆಯಲ್ಲಿ ವಹಿಸಿದ ಪಾತ್ರದ ಕುರಿತಾಗಿ ನುಡಿದರು. ಚಿಂಚೋಳಿಯ ಶಾಸಕ ಡಾ. ಅವಿನಾಶ ಜಾಧವ ಮಾತನಾಡಿ, ಲಿಂಗಾಯತ ಸಮಾಜವು ಅತಿದೊಡ್ಡ ಸಮಾಜವಾಗಿದೆ. ಈ ಹಿಂದಿನಿಂದಲೂ ಸಾಮಾಜಿಕ ನ್ಯಾಯ ನೀಡುತ್ತಾ ಬಂದಿದೆ. ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ ಅವರು ಇಡೀ ವಿಶ್ವಕ್ಕೆ ಗುರುವಾದವರು ಎಂದರು. ಕಾರ್ಯಕ್ರಮದಲ್ಲಿ ನರನಾಳ ಸುಕ್ಷೇತ್ರದ ಶಿವಕುಮಾರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಉಳಿದಂತೆ ಹಾರಾಕೂಡ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದಲ್ಲಿ ವಿವಿಧ ಕಲಾ ಹಾಗೂ ನೃತ್ಯ ತಂಡಗಳಿಂದ ಬಸವಣ್ಣನವರ ಮೂರ್ತಿಯ ಮೆರವಣಿಗೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಬಸವಾಭಿಮಾನಿಗಳು, ವಿವಿಧ ಸಮಾಜದ ಮುಖಂಡರುಗಳು, ಯುವಕರು ಮಕ್ಕಳು ಸೇರಿದಂತೆ ಇನ್ನಿತರರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.

ಪ್ರತಿನಿಧಿ: ಹರ್ಷವರ್ಧನ V ಚಿಮ್ಮನಕಟ್ಟಿ

 

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು