ಮೀಸಲಾತಿ ಭಿಕ್ಷೆಯಲ್ಲ, ಪ್ರಾತಿನಿಧ್ಯದ ಹಕ್ಕು: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಗೌತಮ್ ಬೊಮ್ಮನಹಳ್ಳಿ
**ಮೀಸಲಾತಿ ಭಿಕ್ಷೆಯಲ್ಲ, ಪ್ರಾತಿನಿಧ್ಯದ ಹಕ್ಕು: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಗೌತಮ್ ಬೊಮ್ಮನಹಳ್ಳಿ ಖಡಕ್ ಮಾತು** **ವಿಶೇಷ ವರದಿ: ಕನ್ನಡ ಸಾಮ್ರಾಟ್ ನ್ಯೂಸ್, ಚಿಂಚೋಳಿ** “ಮೀಸಲಾತಿ ಎನ್ನುವುದು ಯಾವುದೇ ಬಡತನ ನಿರ್ಮೂಲನಾ ಕಾರ್ಯಕ್ರಮ ಅಥವಾ ಭಿಕ್ಷೆಯಲ್ಲ; ಸಮಾಜದಲ್ಲಿ ಧ್ವನಿಯಿಲ್ಲದ ಶೋಷಿತ ಸಮುದಾಯಗಳಿಗೆ ಸಂವಿಧಾನ ಕಲ್ಪಿಸಿದ ನ್ಯಾಯಯುತ ಪ್ರಾತಿನಿಧ್ಯದ ಹಕ್ಕು” ಎಂದು ಮುಖಂಡ ಗೌತಮ್ ಬೊಮ್ಮನಹಳ್ಳಿ ಆಕ್ರೋಶಭರಿತ ನುಡಿಗಳಿಂದ ಪ್ರತಿಪಾದಿಸಿದರು. ಚಿಂಚೋಳಿಯ ಸರ್ಕಾರಿ ಕನ್ಯಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಾಲಾ ಶಿಕ್ಷಣ ಹಾಗೂ…