ಚಿಟಗುಪ್ಪ; ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ!
ಚಿಟಗುಪ್ಪ; ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ. ಚಿಟಗುಪ್ಪ:- ರಾಜ್ಯದಲ್ಲಿ ಕೈ ಕೊಟ್ಟಿರುವ ಮಳೆಗಾಲದ ಪ್ರಯುಕ್ತ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿದ್ದು, ಕೂಡಲೇ ಕರ್ನಾಟಕ ರಾಜ್ಯವನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಒತ್ತಾಯಿಸಿ ಬೀದರ್ ಜಿಲ್ಲೆಯ ಚಿಟಗುಪ್ಪದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನೆಯಲ್ಲಿ ಹೋರಾಟಗಾರರು ಹಾಗೂ ರೈತರು ಮಾತನಾಡಿ, ಕರ್ನಾಟಕ ರಾಜ್ಯವನ್ನು ಬರಗಾಲ ಪೀಡಿತ ರಾಜ್ಯವೆಂದು ಘೋಷಿಸಬೇಕು. ರಾಜ್ಯದ ಎಲ್ಲಾ ರೈತರ ಬ್ಯಾಂಕ್ ನಲ್ಲಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಮಳೆ ಕೊರತೆಯಿಂದಾಗಿ…