ವಿಶ್ವನಾಥ್ ಮುತ್ತಪ್ಪ ರೈ ಕೈಕೆಳಗೆ ಲೂಟಿ ಹೊಡೆಯುತ್ತಿದ್ದ ವ್ಯಕ್ತಿ: ಡಿವಿಎಸ್ ಗಂಭೀರ ಆರೋಪ, ಬಿಜೆಪಿಯಲ್ಲಿ ಶುರುವಾಯ್ತು ಒಕ್ಕಲಿಗ ಫೈಟ್!
ವಿಶ್ವನಾಥ್ ಮುತ್ತಪ್ಪ ರೈ ಕೈಕೆಳಗೆ ಲೂಟಿ ಹೊಡೆಯುತ್ತಿದ್ದ ವ್ಯಕ್ತಿ : ಡಿವಿಎಸ್ ಗಂಭೀರ ಆರೋಪ, ಬಿಜೆಪಿಯಲ್ಲಿ ಶುರುವಾಯ್ತು ಒಕ್ಕಲಿಗ ಫೈಟ್! ಬೆಂಗಳೂರು: ನಮಸ್ಕಾರ, ನೀವು ಓದುತ್ತಿದ್ದೀರಿ ಕನ್ನಡ ಸಾಮ್ರಾಟ್ (Kannada Samrat) ವಿಶೇಷ ವರದಿ. ಕರ್ನಾಟಕ ಬಿಜೆಪಿಯಲ್ಲಿ ಈಗ ‘ನಾಯಕರ ಕಚ್ಚಾಟ’ ಬೀದಿಗೆ ಬಂದಿದೆ. ಒಂದೆಡೆ ಒಕ್ಕಲಿಗ ಅಸ್ಮಿತೆಯ ಚರ್ಚೆಯಾದರೆ, ಇನ್ನೊಂದೆಡೆ ಹಳೆಯ ಭೂಗತ ಲೋಕದ ನಂಟುಗಳ ಆರೋಪಗಳು ಮುನ್ನೆಲೆಗೆ ಬಂದಿವೆ. ಹೌದು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನಡುವಿನ…