ಸೇಡಂ: ಗುಂಡಿಬಿದ್ದ ಯಲಮಗೆಟ್–ಗಡಿಕೇಶ್ವರ ರಸ್ತೆ, ಜೀವಭಯದಲ್ಲಿ ಶಾಲಾ ಮಕ್ಕಳು; ಅಧಿಕಾರಿಗಳಿಗೆ ಪ್ರತಿಭಟನೆಯ ಎಚ್ಚರಿಕೆ
ಸೇಡಂ: ಗುಂಡಿಬಿದ್ದ ಯಲಮಗೆಟ್–ಗಡಿಕೇಶ್ವರ ರಸ್ತೆ, ಜೀವಭಯದಲ್ಲಿ ಶಾಲಾ ಮಕ್ಕಳು; ಅಧಿಕಾರಿಗಳಿಗೆ ಪ್ರತಿಭಟನೆಯ ಎಚ್ಚರಿಕೆ! ಸೇಡಂ: ತಾಲೂಕಿನ ಯಲಮಗೆಟ್-ಗಡಿಕೇಶ್ವರ ಮುಖ್ಯ ರಸ್ತೆಯಲ್ಲಿ ಸಂಚರಿಸುವುದು ಎಂದರೆ, ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಸಾಗಿದಂತೆಯೇ ಸರಿ! ಹೌದು, ಈ ರಸ್ತೆಯ ಸಂಪೂರ್ಣ ದುರವಸ್ಥೆಯಿಂದಾಗಿ ಸಾವಿರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿನಿತ್ಯ ಹೇಳತೀರದ ನರಕಯಾತನೆ ಅನುಭವಿಸುತ್ತಿದ್ದಾರೆ. ರಸ್ತೆಯುದ್ದಕ್ಕೂ ಬಾಯ್ತೆರೆದು ನಿಂತಿರುವ ಬೃಹತ್ ಗುಂಡಿಗಳು ಹಾಗೂ ಅಸಮರ್ಪಕ ಬಸ್ ಸಂಚಾರ ವ್ಯವಸ್ಥೆಯಿಂದಾಗಿ, ಮಕ್ಕಳು ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವುದೇ ದೊಡ್ಡ ಸವಾಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ…