ಜನರ ಕಷ್ಟಕ್ಕೆ ಕಿವಿಯಾದ ತಾ.ಪಂ ಇ.ಓ; ಬೇಡಕಪಳ್ಳಿಯಲ್ಲಿ ಮಳೆ ಹಾನಿ ಪರಿಶೀಲನೆ.
ಜನರ ಕಷ್ಟಕ್ಕೆ ಕಿವಿಯಾದ ತಾ.ಪಂ ಇ.ಓ ಸಂತೋಷ್ ಚವಾಣ್; ಬೇಡಕಪಳ್ಳಿಯಲ್ಲಿ ಮಳೆ ಹಾನಿ ಪರಿಶೀಲನೆ. ಚಿಂಚೋಳಿ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಜಲಾವೃತಗೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಾಲ್ಲೂಕಿನ ಸುಲೇಪೇಟ ಹೋಬಳಿಯ ಬೇಡಕಪಳ್ಳಿ ಗ್ರಾಮಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇ.ಓ) ಸಂತೋಷ್ ಚೌವ್ಹಾಣ್ ಅವರು ಭೇಟಿ ನೀಡಿ, ಗ್ರಾಮಸ್ಥರ ಅಹವಾಲುಗಳನ್ನು ಆಲಿಸುವ ಮೂಲಕ ಮಾನವೀಯತೆ ಹಾಗೂ ಜನಪರ ಕಾಳಜಿ ಮೆರೆದಿದ್ದಾರೆ. ಸ್ಥಳದಿಂದಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ: ಗರಗಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೇಡಕಪಳ್ಳಿ ಗ್ರಾಮದಲ್ಲಿ ಮಳೆಯ…