ಶಿಕ್ಷಣದ ದೇಗುಲದಲ್ಲಿ ನಕಲಿ ಬಿಲ್ಗಳ ದರ್ಬಾರ್; ಪೀಠೋಪಕರಣಗಳ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದ ಭ್ರಷ್ಟ ಅಧಿಕಾರಿಗಳು ಅಂದರ್
ಶಿಕ್ಷಣದ ದೇಗುಲದಲ್ಲಿ ನಕಲಿ ಬಿಲ್ಗಳ ದರ್ಬಾರ್; ಪೀಠೋಪಕರಣಗಳ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದ ಭ್ರಷ್ಟ ಅಧಿಕಾರಿಗಳು ಅಂದರ್. ವರದಿ: ವಿಶೇಷ ಪ್ರತಿನಿಧಿ, ಕನ್ನಡ ಸಾಮ್ರಾಟ್ ಬೀದರ್: ವಿದ್ಯಾದೇಗುಲವಾಗಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಬೇಕಿದ್ದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದು ಭ್ರಷ್ಟರ ಪಾಲಿಗೆ ಅಕ್ಷರಶಃ ‘ಲೂಟಿಯ ಅಡ್ಡೆ’ಯಾಗಿ ಮಾರ್ಪಟ್ಟಿರುವ ಆಘಾತಕಾರಿ ಘಟನೆ ಬೀದರ್ನಲ್ಲಿ ಬೆಳಕಿಗೆ ಬಂದಿದೆ. ಬೀದರ್ನ ‘ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ’ದಲ್ಲಿ ನಡೆದ ಬರೋಬ್ಬರಿ 45 ಕೋಟಿ ರೂ. ಮೊತ್ತದ ಹಗರಣಕ್ಕೆ ಸಂಬಂಧಿಸಿದಂತೆ…