ಕಾಳಗಿ-ಚಿಂಚೋಳಿ: 50 ಗ್ರಾಮಗಳಲ್ಲಿ ತಲೆ ಎತ್ತಲಿದೆ ಬಸವೇಶ್ವರರ ಪುತ್ಥಳಿ! ಸಮಾನತೆಯ ಸಂದೇಶ ಸಾರಲು ಮಹಾಸಭಾದಿಂದ ಭರ್ಜರಿ ಬೆಂಬಲ
ಕಾಳಗಿ-ಚಿಂಚೋಳಿ: 50 ಗ್ರಾಮಗಳಲ್ಲಿ ತಲೆ ಎತ್ತಲಿದೆ ಬಸವೇಶ್ವರರ ಪುತ್ಥಳಿ! ಸಮಾನತೆಯ ಸಂದೇಶ ಸಾರಲು ಮಹಾಸಭಾದಿಂದ ಭರ್ಜರಿ ಬೆಂಬಲ ಕಾಳಗಿ (ಮೇ 18): ಹನ್ನೆರಡನೇ ಶತಮಾನದ ಕ್ರಾಂತಿಯೋಗಿ, ವಿಶ್ವಗುರು ಬಸವಣ್ಣನವರ ಸಮಾನತೆಯ ತತ್ವಗಳು ಕೇವಲ ವಚನಗಳಿಗೆ ಮಾತ್ರ ಸೀಮಿತವಾಗದೆ, ಪ್ರತಿಯೊಂದು ಹಳ್ಳಿ-ಹಳ್ಳಿಗಳಲ್ಲೂ ಜೀವಂತವಾಗಿರಬೇಕು ಎಂಬ ಸದಾಶಯದೊಂದಿಗೆ ಕಾಳಗಿ-ಚಿಂಚೋಳಿ ತಾಲೂಕಿನಲ್ಲಿ ಒಂದು ಮಹತ್ವದ ಹೆಜ್ಜೆ ಇಡಲಾಗಿದೆ. ಉಭಯ ತಾಲೂಕುಗಳ ಬರೋಬ್ಬರಿ 50 ಗ್ರಾಮಗಳಲ್ಲಿ ಬಸವೇಶ್ವರರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಬೃಹತ್ ಯೋಜನೆಯೊಂದು ರೂಪುಗೊಂಡಿದೆ. ತಾಲೂಕಿನ ಹಲಚೇರಾ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಬಸವೇಶ್ವರ…