ಕಣ್ಣೀರ ವಿದಾಯ: ರಾಮನಗರದ ನೆಚ್ಚಿನ ಫಾರ್ಮ್ಹೌಸ್ನಲ್ಲಿ ಪಂಚಭೂತಗಳಲ್ಲಿ ಲೀನರಾದ ನಟ ದಿಲೀಪ್ ರಾಜ್!
ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ; ಕುಟುಂಬಸ್ಥರ ಆಕ್ರಂದನ, ಸ್ಯಾಂಡಲ್ವುಡ್ನಿಂದ ಅಂತಿಮ ನಮನ. ರಾಮನಗರ: ಕನ್ನಡಿಗರ ನೆಚ್ಚಿನ ನಟ, ನಿರ್ಮಾಪಕ ಹಾಗೂ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಖ್ಯಾತಿಯ ದಿಲೀಪ್ ರಾಜ್ (47) ಅವರ ಹಠಾತ್ ನಿಧನ ಇಡೀ ಕರುನಾಡನ್ನು ಬೆಚ್ಚಿಬೀಳಿಸಿದೆ. ಹೃದಯಾಘಾತದಿಂದ ನಿಧನರಾದ ಈ ಬಹುಮುಖ ಪ್ರತಿಭೆಯ ಅಂತ್ಯಕ್ರಿಯೆಯನ್ನು ಅವರ ನೆಚ್ಚಿನ ತಾಣವಾದ ರಾಮನಗರ ತಾಲೂಕಿನ ಗುನ್ನೂರು ಬಳಿಯ ಫಾರ್ಮ್ ಹೌಸ್ನಲ್ಲಿ ಲಿಂಗಾಯತ ಸಂಪ್ರದಾಯದಂತೆ ಸಕಲ ವಿಧಿವಿಧಾನಗಳೊಂದಿಗೆ ಭಾವುಕವಾಗಿ ನೆರವೇರಿಸಲಾಯಿತು. ನೆಚ್ಚಿನ ತೋಟದ ಮನೆಯಲ್ಲೇ ಕೊನೆಯ ಪಯಣ ದಿಲೀಪ್…