ಭ್ರಷ್ಟರ ಪಾಲಿನ ಸಿಂಹಸ್ವಪ್ನ ‘ಕರ್ನಾಟಕ ಲೋಕಾಯುಕ್ತ’ಕ್ಕೆ 40 ವರ್ಷ: ಏ.18ರಂದು ವಿಧಾನಸೌಧದಲ್ಲಿ ಐತಿಹಾಸಿಕ ಕಾರ್ಯಕ್ರಮ.
ಭ್ರಷ್ಟರ ಪಾಲಿನ ಸಿಂಹಸ್ವಪ್ನ ‘ಕರ್ನಾಟಕ ಲೋಕಾಯುಕ್ತ’ಕ್ಕೆ 40 ವರ್ಷ: ಏ.18ರಂದು ವಿಧಾನಸೌಧದಲ್ಲಿ ಐತಿಹಾಸಿಕ ಕಾರ್ಯಕ್ರಮ. ಕನ್ನಡ ಸಾಮ್ರಾಟ್ ವಿಶೇಷ ವರದಿ ಬೆಂಗಳೂರು: ನಮ್ಮ ಕರುನಾಡಿನಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ, ಆಡಳಿತದಲ್ಲಿ ಪಾರದರ್ಶಕತೆ ತರಲು ಹಗಲಿರುಳು ಶ್ರಮಿಸುತ್ತಿರುವ ‘ಕರ್ನಾಟಕ ಲೋಕಾಯುಕ್ತ’ ಸಂಸ್ಥೆ ಇದೀಗ ತನ್ನ ಸಾರ್ಥಕ ಸೇವೆಯ 40 ವಸಂತಗಳನ್ನು ಪೂರೈಸಿದೆ. ಈ ಐತಿಹಾಸಿಕ ಮೈಲುಗಲ್ಲನ್ನು ಸಂಭ್ರಮಿಸಲು 2026ರ ಏಪ್ರಿಲ್ 18ರ ಶನಿವಾರದಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಬೃಹತ್ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು…