ಕಲ್ಯಾಣ ಕರ್ನಾಟಕ: 371(ಜೆ) ಕೇವಲ ರಾಜಕೀಯ ದಾಳವಲ್ಲ; ನಕಲಿ ‘ಕ್ರೆಡಿಟ್’ ಪಡೆಯುವವರ ವಿರುದ್ಧ ಗೌತಮ್ ವೈಜನಾಥ್ ಪಾಟೀಲ ಗುಡುಗು
ಅಂದು ಹೋರಾಟವನ್ನು ವಿರೋಧಿಸಿದವರೇ ಇಂದು ಲಾಭ ಪಡೆಯಲು ಮುಗಿಬೀಳುತ್ತಿರುವುದು ದುರಂತ. ಸಾವಿರಾರು ಕೋಟಿ ಅನುದಾನ ಘೋಷಣೆಯಾದರೂ, ತಳಮಟ್ಟದಲ್ಲಿ ಅಭಿವೃದ್ಧಿ ಶೂನ್ಯ: ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ್ ಪಾಟೀಲ ಆಕ್ರೋಶ. ವರದಿ: ಕನ್ನಡ ಸಾಮ್ರಾಟ್ ಡಿಜಿಟಲ್ ಡೆಸ್ಕ್ ಕಲಬುರ್ಗಿ /ಚಿಂಚೋಳಿ: ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದೊಡ್ಡ ಆಸ್ತಿ ಹಾಗೂ ಜೀವನಾಡಿಯಾಗಿರುವ ‘ಆರ್ಟಿಕಲ್ 371(ಜೆ)’ ಇದೀಗ ಕೇವಲ ರಾಜಕೀಯ ನಾಯಕರ ಲಾಭದ ಸರಕಾಗಿ ಬಳಕೆಯಾಗುತ್ತಿರುವುದಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ್ ವೈಜನಾಥ್ ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಜವಾದ…