ಮಹಿಳಾ ಸಾಧಕಿಯರಿಗೆ ಒಲಿದ ‘ತ್ರಿವೇಣಿ ಸಂಗಮ’ ಮತ್ತು ‘ವಿಜ್ಞಾನ ರತ್ನ’: ಕಲಬುರಗಿಯಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ
ಮಹಿಳಾ ಸಾಧಕಿಯರಿಗೆ ಒಲಿದ ‘ತ್ರಿವೇಣಿ ಸಂಗಮ’ ಮತ್ತು ‘ವಿಜ್ಞಾನ ರತ್ನ’: ಕಲಬುರಗಿಯಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ ವರದಿ: ಕನ್ನಡ ಸಮ್ರಾಟ್ ನ್ಯೂಸ್ ಡೆಸ್ಕ್ ಕಲಬುರಗಿ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಗೈದು ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಬೆನ್ನು ತಟ್ಟುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂತಹದ್ದೊಂದು ಅರ್ಥಪೂರ್ಣ ಹಾಗೂ ಸ್ಫೂರ್ತಿದಾಯಕ ಕ್ಷಣಗಳಿಗೆ ಕಲಬುರಗಿ ನಗರದ ರಂಗಾಯಣ ಸಾಕ್ಷಿಯಾಯಿತು. ಸಿರಿಗನ್ನಡ ವೇದಿಕೆ (ರಿ) ಜಿಲ್ಲಾ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ, ಭಾನುವಾರ (ಮಾ.29) ಬೆಳಿಗ್ಗೆ ‘ತ್ರಿವೇಣಿ…