“ಶಾತವಾಹನರ ಕಾಲದ ಬೌದ್ಧ ಚರಿತ್ರೆಗೆ ಸಿಗುವುದೇ ಹೊಸ ಜೀವ? ಮೋದಿ ಸರ್ಕಾರದ ಮೌನ ಮುರಿಯಲು ಮುಂದಾದ ಮಲ್ಲಿಕಾರ್ಜುನ ಖರ್ಗೆ!”
ನವದೆಹಲಿ: ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸದ ಪುಟಗಳಲ್ಲಿ ಕಳೆದುಹೋಗಿರುವ ಸತ್ಯಗಳನ್ನು ಹೊರತರಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆಯನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಸರ್ಕಾರದ ಮುಂದೆ ಇಟ್ಟಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ಪುರಾತನ ಬೌದ್ಧ ವಿಹಾರದ ಅವಶೇಷಗಳನ್ನು ಸಂಪೂರ್ಣವಾಗಿ ಉತ್ಖನನ ಮಾಡಬೇಕು ಎಂದು ಆಗ್ರಹಿಸಿರುವ ಅವರು, ನಮ್ಮ ಮಣ್ಣಿನ ಅಪ್ರತಿಮ ಇತಿಹಾಸದ ಬಗ್ಗೆ ಕೇಂದ್ರದ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಇತಿಹಾಸ ಮಣ್ಣಾಗಬಾರದು: ಖರ್ಗೆ ಕಳಕಳಿ…