ನ್ಯಾಯಾಂಗ ಕ್ಷೇತ್ರದ ದಿಗ್ಗಜ, ನಾಡೋಜ ಶಿವರಾಜ ಪಾಟೀಲರಿಗೆ ಗುಲ್ಬರ್ಗ ವಕೀಲರ ಸಂಘದಿಂದ ಒಲವಿನ ಸನ್ಮಾನ: ನ್ಯಾಯಬದ್ಧ ಸಮಾಜ ನಿರ್ಮಾಣಕ್ಕೆ ಅವರ ಸೇವೆ ಅನನ್ಯ
ಕಲಬುರಗಿಯ ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಡೆದ ಅರ್ಥಪೂರ್ಣ ಸಮಾರಂಭ; ನ್ಯಾಯಾಂಗದ ಮೌಲ್ಯಗಳನ್ನು ಎತ್ತಿಹಿಡಿದ ಶ್ರೇಷ್ಠ ವ್ಯಕ್ತಿತ್ವಕ್ಕೆ ಕೃತಜ್ಞತೆಯ ಅರ್ಪಣೆ. ವರದಿಗಾರರು: R ಕೋಸ್ಟಿ ವಿಶೇಷ ಪ್ರತಿನಿಧಿ ಕಲಬುರಗಿ: ನ್ಯಾಯಾಂಗವೆಂದರೆ ಕೇವಲ ತೀರ್ಪುಗಳಲ್ಲ, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕಾದ ಸಾಂತ್ವನ ಮತ್ತು ಹಕ್ಕು. ಇಂತಹ ನ್ಯಾಯಬದ್ಧ ಮೌಲ್ಯಗಳನ್ನು ತಮ್ಮ ಇಡೀ ವೃತ್ತಿಜೀವನದಲ್ಲಿ ಅಳವಡಿಸಿಕೊಂಡು, ನಾಡಿನ ಹೆಮ್ಮೆಯಾಗಿ ಬೆಳೆದವರು ವಿಶ್ರಾಂತ ನ್ಯಾಯಮೂರ್ತಿ ನಾಡೋಜ ಶಿವರಾಜ ಪಾಟೀಲರು. ಅವರ ಈ ಸುದೀರ್ಘ ಹಾಗೂ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ, ಗುಲ್ಬರ್ಗ ನ್ಯಾಯವಾದಿಗಳ ಸಂಘವು…