ಶ್ರೀಮಂತರಿಗೆ ಸಾಲಮನ್ನಾ, ಬಡವರಿಗೆ ದಂಡದ ಬರೆ: ‘ಕನಿಷ್ಠ ಬ್ಯಾಲೆನ್ಸ್’ ನೆಪದಲ್ಲಿ 5 ವರ್ಷಗಳಲ್ಲಿ ಸರ್ಕಾರಿ ಬ್ಯಾಂಕ್ಗಳು ಸುಲಿಗೆ ಮಾಡಿದ್ದು ಬರೋಬ್ಬರಿ ₹8,936 ಕೋಟಿ!
ಕನ್ನಡ ಸಾಮ್ರಾಟ್ ವಿಶೇಷ ವರದಿ ಶ್ರೀಮಂತರಿಗೆ ಸಾಲಮನ್ನಾ, ಬಡವರಿಗೆ ದಂಡದ ಬರೆ: ‘ಕನಿಷ್ಠ ಬ್ಯಾಲೆನ್ಸ್’ ನೆಪದಲ್ಲಿ 5 ವರ್ಷಗಳಲ್ಲಿ ಸರ್ಕಾರಿ ಬ್ಯಾಂಕ್ಗಳು ಸುಲಿಗೆ ಮಾಡಿದ್ದು ಬರೋಬ್ಬರಿ ₹8,936 ಕೋಟಿ! ನವದೆಹಲಿ: ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲವೆಂದು ಎಂದಾದರೂ ದಂಡ ಕಟ್ಟಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮ್ಮನ್ನು ಕೆರಳಿಸುವುದು ಖಂಡಿತ. ಒಂದೆಡೆ ಕೋಟ್ಯಧಿಪತಿಗಳ ಸಾವಿರಾರು ಕೋಟಿ ಸಾಲವನ್ನು ನಗುನಗುತ್ತಾ ಮನ್ನಾ ಮಾಡುವ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ, ಇನ್ನೊಂದೆಡೆ ಖಾತೆಯಲ್ಲಿ ‘ಕನಿಷ್ಠ ಬ್ಯಾಲೆನ್ಸ್’ (Minimum Balance) ಇಡಲು ಪರದಾಡುವ ಬಡ ಮತ್ತು…