Home » ನ್ಯೂಸ್ » Kalaburgi » ಮಹಿಳಾ ಸ್ವಾತಂತ್ರ್ಯವು ಸ್ವೇಚ್ಛೆಯಾಗದಿರಲಿ, ಪ್ರೀತಿ-ಕರುಣೆ ಬತ್ತದಿರಲಿ: ಕಲಬುರಗಿಯಲ್ಲಿ ಕಾವ್ಯಶ್ರೀ ಮಹಾಗಾಂವ್ಕರ್ ಕಿವಿಮಾತು

ಮಹಿಳಾ ಸ್ವಾತಂತ್ರ್ಯವು ಸ್ವೇಚ್ಛೆಯಾಗದಿರಲಿ, ಪ್ರೀತಿ-ಕರುಣೆ ಬತ್ತದಿರಲಿ: ಕಲಬುರಗಿಯಲ್ಲಿ ಕಾವ್ಯಶ್ರೀ ಮಹಾಗಾಂವ್ಕರ್ ಕಿವಿಮಾತು

ಮಹಿಳಾ ಸ್ವಾತಂತ್ರ್ಯವು ಸ್ವೇಚ್ಛೆಯಾಗದಿರಲಿ, ಪ್ರೀತಿ-ಕರುಣೆ ಬತ್ತದಿರಲಿ: ಕಲಬುರಗಿಯಲ್ಲಿ ಕಾವ್ಯಶ್ರೀ ಮಹಾಗಾಂವ್ಕರ್ ಕಿವಿಮಾತು

ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್‌ನಿಂದ ಅರ್ಥಪೂರ್ಣ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ

ವರದಿ: ಆರ್. ಕೋಸ್ತಿ, ವಿಶೇಷ ಪ್ರತಿನಿಧಿ, ಕನ್ನಡ ಸಾಮ್ರಾಟ್

ಕಲಬುರಗಿ: ಆಧುನಿಕ ಬದುಕಿನಲ್ಲಿ ಮಹಿಳೆ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಬದುಕಲು ಇಚ್ಛಿಸುತ್ತಿದ್ದಾಳೆ. ಆದರೆ, ಆಕೆಯ ಈ ‘ಸ್ವಾತಂತ್ರ್ಯ’ವು ಎಂದಿಗೂ ‘ಸ್ವೇಚ್ಛೆ’ಯಾಗಬಾರದು ಎಂದು ప్రముఖ ಚಿಂತಕಿ ಕಾವ್ಯಶ್ರೀ ಮಹಾಗಾಂವ್ಕರ್ ಎಚ್ಚರಿಸಿದರು.

​ನಗರದ ಕಲಾ ಮಂಡಳಿಯಲ್ಲಿ ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್ ಹಾಗೂ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಠೋರವಾಗದಿರಲಿ ಮಹಿಳೆಯ ಮನಸ್ಸು:

“ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯ ವಾಕ್ಯ ‘ಪಡೆದುಕೊಳ್ಳಲು ಕೊಡಿ’ (Give to gain). ಇಂದಿನ ಯುವತಿಯರು ಉನ್ನತ ವ್ಯಾಸಂಗ, ಪ್ರತಿಷ್ಠಿತ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಸಹಜವಾಗಿ ದಯೆ, ಕರುಣೆ ಹಾಗೂ ಪ್ರೀತಿಯನ್ನು ಹಂಚಬೇಕಾದ ಮಹಿಳೆಯ ಮನಸ್ಸು ಈ ಯಾಂತ್ರಿಕ ಬದುಕಿನಲ್ಲಿ ಕಠೋರವಾಗುತ್ತಿದೆ. ಇದು ಬದಲಾಗಬೇಕು,” ಎಂದು ಅವರು ಆಶಿಸಿದರು.

​”ಇಡೀ ಜೀವಜಗತ್ತಿನ ಮೂಲ ದ್ರವ್ಯವೇ ಪ್ರೀತಿ ಮತ್ತು ಸಾಮರಸ್ಯ. ಶರಣರು ಹೇಳಿದಂತೆ ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬ ಆದರ್ಶ ತತ್ವ ನಮ್ಮದಾಗಬೇಕು. ಕೌಟುಂಬಿಕ ಸಾಮರಸ್ಯದಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ,” ಎಂದು ಅವರು ಸಭಿಕರ ಗಮನ ಸೆಳೆದರು.

ಗಮನ ಸೆಳೆದ ಕಾರ್ಯಕ್ರಮದ ರೂವಾರಿಗಳು:

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್‌ನ ಅಧ್ಯಕ್ಷರಾದ ಸುಮಾ ಎಸ್. ಕವಲ್ದಾರ್ ವಹಿಸಿದ್ದರು. ಅವರ ನೇತೃತ್ವದಲ್ಲಿ ಇಡೀ ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಮೂಡಿಬಂತು.

​ವೇದಿಕೆ ಕಾರ್ಯಕ್ರಮದ ಮುನ್ನ ಅನ್ನಪೂರ್ಣ ಸಂಗೊಳಗಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರೆ, ಭಾಗೀರಥಿ ಗುನ್ನಪುರ ಅವರು ಸಸಿಗೆ ನೀರೆರೆಯುವ ಮೂಲಕ ಪ್ರಕೃತಿ ಪ್ರೇಮದ ಸಂದೇಶ ಸಾರಿದರು.

ಸಾಧಕಿಯರಿಗೆ ಒಲಿದ ಪ್ರಶಸ್ತಿ:

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತ ಮಹಿಳೆಯರನ್ನು ಗುರುತಿಸಿ, ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶರಣು ಪಪ್ಪಾ ಹಾಗೂ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷರಾದ ಎಂ.ಎಸ್. ಪಾಟೀಲ್ ನರಬೋಳ ಅವರು ಪ್ರಶಸ್ತಿಗಳನ್ನು ವಿತರಿಸಿ, ಸಾಧಕಿಯರನ್ನು ಬೆನ್ನು ತಟ್ಟಿದರು.

  • ಪ್ರಶಸ್ತಿ ಪುರಸ್ಕೃತರು: ಮಲ್ಲಮ್ಮ ಪಾಟೀಲ್, ಶ್ರೀದೇವಿ, ಸಾವಿತ್ರಿ ತಾವರಕೇಡ್, ಜ್ಯೋತಿ ಪಾಟೀಲ, ಹಾಗೂ ಸುಜಾತಾ ಪಾಟೀಲ.
  • ವಿಶೇಷ ಸನ್ಮಾನಿತರು: ರಶ್ಮಿ ಸಿದ್ದರಾಮಯ್ಯ ಹಿರೇಮಠ, ಸಿದ್ದಮ್ಮ ಕವಿ ದೇಗಾಂವ್, ಮತ್ತು ಲತಾ ಜಗದೇವಿ ಅವರನ್ನು ಇದೇ ವೇದಿಕೆಯಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

​ಕಾರ್ಯಕ್ರಮದಲ್ಲಿ ಅಶ್ವಿನಿ ಚವ್ಹಾಣ್, ಸಂದೀಪ್ ಬರಣಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು