‘ದಿನಾಲು ಪರಿಸರ ದಿನ ಆಚರಿಸಿದರೆ ಮಾತ್ರ ಪರಿಸರ ಸಂರಕ್ಷಣೆ’: ಶಿವಶರಣಪ್ಪ ಮುಳೆಗಾಂವ ಕಿವಿಮಾತು
ಕಲಬುರಗಿ: ನಗರದ ಎಂಪಿಎಚ್‌ಎಸ್ ಕಾಲೇಜಿನಲ್ಲಿಂದು ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡ ಪರಿಸರ ಸಂರಕ್ಷಣೆ
ಭವಿಷ್ಯದ ಸವಾಲುಗಳು ಉಪನ್ಯಾಸ ಕಾರ್ಯಕ್ರಮವನ್ನು
ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಅವರು ಉದ್ಘಾಟಿಸಿದರು.ದೇವಿದಾಸ ಪವಾರ,
ಸುನೀಲ ಮಾನಪಡೆ ಮಾತನಾಡಿದರು ಪರಿಸರ ಉಳಿಸುವ
ಕೆಲಸ ಮಾಡಬೇಕು ಗಿಡಗಳನ್ನು ಕಡಿಯುವುದು ನಿಲ್ಲಿಸಬೇಕು
ಮತ್ತು ಗಿಡ ಹಚ್ಚಲು ಜಾಗೃತಿ ಮಕ್ಕಳ ಮತ್ತು ಯುವಕರ ಜವಾಬ್ದಾರಿ ಬಹಳ ಆಗಿದೆ ಎಂದರು.
ಶ್ರೀ ಶಿವ ಶರಣಪ್ಪ ಮೊಳೇಗಾವ್ ವಿಶ್ವ ಪರಿಸರ ದಿನಾಚರಣೆ ಮಾಡಿದರೆ ಮುಗಿಯದು ನಾವು ದಿನಾಲು ಪರಿಸರ ದಿನಾಚರಣೆ ಆಚರಿಸಬೇಕಾಗುತ್ತದೆ ಪರಿಸರ ಉಳಿಸೋಣ ಎಂದು ಮಕ್ಕಳಿಗೆ ತಿಳಿಹೇಳಿದರು. ಇದೇ ಸಮಯದಲ್ಲಿ ಸುಭಾಶಚಂದ್ರ ಆರ್. ಸಂಜೀವಕುಮಾರ ಕಾಂಬಳೆ.ಎ.ಎಸ್ ಹರಸೂರ, ಮೈಲಾರಿ ದೊಡ್ಡನಿ ಸೇರಿದಂತೆ ಶಾಲಾ ಶಿಕ್ಷಕರು ಮಕ್ಕಳು ಇತರರಿದ್ದರು.






