Home » ಜಿಲ್ಲೆ » Bidar » “ತಾತನವರ ಆರೋಗ್ಯ ಸುಧಾರಿಸುತ್ತಿದೆ, ಯಾರೂ ಆತಂಕ ಪಡುವುದು ಬೇಡ”: ಸಂಸದ ಸಾಗರ್ ಖಂಡ್ರೆ ಸ್ಪಷ್ಟನೆ

“ತಾತನವರ ಆರೋಗ್ಯ ಸುಧಾರಿಸುತ್ತಿದೆ, ಯಾರೂ ಆತಂಕ ಪಡುವುದು ಬೇಡ”: ಸಂಸದ ಸಾಗರ್ ಖಂಡ್ರೆ ಸ್ಪಷ್ಟನೆ

“ತಾತನವರ ಆರೋಗ್ಯ ಸುಧಾರಿಸುತ್ತಿದೆ, ಯಾರೂ ಆತಂಕ ಪಡುವುದು ಬೇಡ”: ಸಂಸದ ಸಾಗರ್ ಖಂಡ್ರೆ ಸ್ಪಷ್ಟನೆ

ಬೀದರ್/ಭಾಲ್ಕಿ : ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರಾದ ಡಾ.ಭೀಮಣ್ಣ ಖಂಡ್ರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರ ಮೊಮ್ಮಗ ಹಾಗೂ ಬೀದರ್ ಲೋಕಸಭಾ ಸದಸ್ಯ ಸಾಗರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

​ಡಾ.ಭೀಮಣ್ಣ ಖಂಡ್ರೆ ಅವರ ಆರೋಗ್ಯದ ಕುರಿತು ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ಈ ಕುರಿತು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ. “ತಾತನವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಅವರು ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ,” ಎಂದು ತಿಳಿಸಿದ್ದಾರೆ.

ವದಂತಿಗಳಿಗೆ ಕಿವಿಗೊಡಬೇಡಿ

ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇತರೆಡೆ ಹಬ್ಬುತ್ತಿರುವ ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದು ಮತ್ತು ಅಂತಹ ವದಂತಿಗಳನ್ನು ಯಾರೂ ಹಬ್ಬಿಸಬಾರದು ಎಂದು ಸಾಗರ್ ಖಂಡ್ರೆ ಮನವಿ ಮಾಡಿದ್ದಾರೆ. ಅಭಿಮಾನಿಗಳು ಮತ್ತು ಹಿತೈಷಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, “ತಾತನವರು ಸಂಪೂರ್ಣ ಗುಣಮುಖರಾಗಿ ಮರಳಲು ನಾವೆಲ್ಲರೂ ಒಟ್ಟಾಗಿ ಪ್ರಾರ್ಥಿಸೋಣ,” ಎಂದು ಕೋರಿಕೊಂಡಿದ್ದಾರೆ

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು