ಚಿಂಚೋಳಿ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣ ಅಧಿಕಾರಿ ಆಗಿ ಜವಾಬ್ದಾರಿ ವಹಿಸಿಕೊಂಡಿರುವ ದೇವೀಂದ್ರಪ್ಪ ಹೊಳ್ಕರ್ ರವರಿಗೆ ಖಾಸಗಿ ಸರಕಾರ ಅನುದಾನ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಆಡಳಿತ ಅಧಿಕಾರಿ, ಮುಖ್ಯೋಪಾಧ್ಯಾಯರ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಸಂಘಗಳ ತಾಲೂಕ ಅಧ್ಯಕ್ಷ ಸುರೇಶ ಕೊರವಿ, ಸರಕಾರಿ ಅನುದಾನಿತ ಶಾಲೆಗಳ ತಾಲೂಕ ಅಧ್ಯಕ್ಷ ರಾಜಶೇಖರ ಮುಸ್ತರಿ, ಅನುದಾನ ರಹಿತ ಶಾಲೆಗಳ ಒಕ್ಕೂಟದ ತಾಲೂಕ ಅಧ್ಯಕ್ಷ ಭೀಮಶೆಟ್ಟಿ ಮುರುಡಾ, ಶಾಲಾ ಸಂಸ್ಥೆಯ ಮುಖ್ಯಸ್ಥರಾದ, ಉಡುಪಿ ಮಲ್ಲಿಕಾರ್ಜುನ, ಕಾಶಿನಾಥ ಮಡಿವಾಳ, ನವೀನ ರೆಡ್ಡಿ, ವೀರಶೆಟ್ಟಿ, ರಾಜೇಂದ್ರ ಪ್ರಸಾದ, ಬಾಬು ಬುಳ್ಳಾ, ಇನ್ನು ಅನೇಕರು ಉಪಸ್ಥಿತರಿದ್ದರು.






