Home » ಕಲಬುರಗಿ » ಚಿಂಚೋಳಿ » ಚಿಂಚೋಳಿ; ಐತಿಹಾಸಿಕ ಧರ್ಮ ಸಭೆಗೆ ಸಾಕ್ಷಿಯಾಗಲಿರುವ ಆದಿ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ.

ಚಿಂಚೋಳಿ; ಐತಿಹಾಸಿಕ ಧರ್ಮ ಸಭೆಗೆ ಸಾಕ್ಷಿಯಾಗಲಿರುವ ಆದಿ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ.

ಚಿಂಚೋಳಿ; ಐತಿಹಾಸಿಕ ಧರ್ಮ ಸಭೆಗೆ ಸಾಕ್ಷಿಯಾಗಲಿರುವ ಆದಿ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ.

ಚಿಂಚೋಳಿ: ತಾಲ್ಲೂಕಿನಲ್ಲಿ ದಿನಾಂಕ 25/05/2026 ರಂದು ಅಣವಾರ ಕ್ರಾಸ್ ನಲ್ಲಿರುವ ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ (ಪಾದಗಟ್ಟಿ) ಚಿಂಚೋಳಿಯಲ್ಲಿ ನಡೆಯಲಿರುವ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿಯ ಪ್ರಯುಕ್ತ ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಮಹಾತ್ಮ ಬಸವೇಶ್ವರ ಜಯಂತಿಯನ್ನು ಆಯೋಜಿಸಲಾಗಿದೆ ಎಂದು ಜಯಂತೋತ್ಸವ ಸಮಿತಿಯ ಅಧ್ಯಕ್ಷ ಸಂಗಯ್ಯ ಸ್ವಾಮಿ ಅಣವಾರ ನುಡಿದರು.
ಅಣವಾರ ಕ್ರಾಸ್ ನಲ್ಲಿರುವ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಸುಕ್ಷೇತ್ರ ನಿಡಗುಂದಾದ ಕಂಚಾಳ ಕುಂಟಿ ಕರುಣೇಶ್ವರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ ಅವರು, ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಉಜ್ಜಯಿನಿ ಮಹಾಪೀಠದ ಶ್ರೀಗಳು ಹಾಗೂ ಶ್ರೀಮದ್ ಗಿರಿರಾಜ್ ಸೂರ್ಯಸಿಂಹಾಸನಾಧೀಶ್ವರ ಶ್ರೀ 1008ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸುತ್ತಿದ್ದು, ಇನ್ನಿತರ 22 ಜನ ಹರ ಗುರು ಚರ ಮೂರ್ತಿಗಳು ಸಾನಿಧ್ಯವನ್ನು ವಹಿಸುತ್ತಿದ್ದು ಧರ್ಮ ಸಭೆಯನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಸುಕ್ಷೇತ್ರ ತೊಟ್ನಳ್ಳಿಯ ಮಹಾಂತೇಶ್ವರ ಮಠದ ಪೂಜ್ಯ ತ್ರಿಮೂರ್ತಿ ಶಿವಾಚಾರ್ಯರು ನೀಡುತ್ತಿದ್ದು ಕಾರ್ಯಕ್ರಮಕ್ಕೆ ವೈ.ಶಿ. ಸಚಿವ ಡಾ. ಶರಣ ಪ್ರಕಾಶ ಪಾಟೀಲ,ಬೀದರ್ ಸಂಸದ ಸಾಗರ ಖಂಡ್ರೆ,ಶಾಸಕ ಡಾ. ಅವಿನಾಶ ಜಾಧವ,ರಾಜಕುಮಾರ ಪಾಟೀಲ, ಸುಭಾಷ ರಾಠೋಡ ಸೇರಿದಂತೆ ಇನ್ನಿತರ ರಾಜಕೀಯ ಗಣ್ಯರು, ವಿವಿಧ ಸಮಾಜದ ಮುಖಂಡರುಗಳು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ, ಜಯಂತೋತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶಿವಬಸಯ್ಯ ಎಸ್ ಸ್ವಾಮಿ, ಗುಂಡಯ್ಯ ಸ್ವಾಮಿ, ಬಬ್ಲು ದೇಶಮುಖ, ಸಂತೋಷ ಕಡಗದ, ಲೋಕೇಶ ಶೇಳ್ಳಗಿ, ರೇವಣಸಿದ್ಧ ಮೊಘಾ, ವಿರೇಶ ಯಂಪಲ್ಲಿ,ವೀರಣ್ಣ ಗಂಗಾಣಿ ಸೇರಿದಂತೆ ಇನ್ನಿತರರಿದ್ದರು.

ಪ್ರತಿನಿಧಿ: ಹರ್ಷವರ್ಧನ V ಚಿಮ್ಮನಕಟ್ಟಿ

 

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು