Home » ನ್ಯೂಸ್ » Kalaburgi » ಇರಾನ್ ಪರ ಕಣ್ಣೀರು, ಬಾಂಗ್ಲಾ ಸಂತ್ರಸ್ತರ ಮೇಲೆ ಮೌನವೇಕೆ?: ಎಡಪಂಥೀಯರ ದ್ವಂದ್ವ ನಿಲುವಿಗೆ ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ

ಇರಾನ್ ಪರ ಕಣ್ಣೀರು, ಬಾಂಗ್ಲಾ ಸಂತ್ರಸ್ತರ ಮೇಲೆ ಮೌನವೇಕೆ?: ಎಡಪಂಥೀಯರ ದ್ವಂದ್ವ ನಿಲುವಿಗೆ ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ

ಇರಾನ್ ಪರ ಕಣ್ಣೀರು, ಬಾಂಗ್ಲಾ ಸಂತ್ರಸ್ತರ ಮೇಲೆ ಮೌನವೇಕೆ?: ಎಡಪಂಥೀಯರ ದ್ವಂದ್ವ ನಿಲುವಿಗೆ ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ

ಕಲಬುರಗಿ (ಕನ್ನಡ ಸಾಮ್ರಾಟ್ ವಿಶೇಷ ವರದಿ- R. ಕೋಸ್ಟಿ):

“ಸಾವು ಯಾರದ್ದೇ ಆಗಿರಲಿ, ಅಲ್ಲಿ ಮೊದಲು ಸಾಯುವುದು ಮನುಷ್ಯತ್ವ.” ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸುವ ಎಡಪಂಥೀಯ ವಿಚಾರವಾದಿಗಳು, ನೆರೆಯ ಬಾಂಗ್ಲಾದೇಶದಲ್ಲಿ ಮುಗ್ಧರನ್ನು ಜೀವಂತ ದಹಿಸಿದಾಗ ಮೌನಕ್ಕೆ ಶರಣಾಗಿದ್ದೇಕೆ? ಎಂದು ಬಿಜೆಪಿ ಒಬಿಸಿ ಮೋರ್ಚಾ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕನ್ನಡ ಸಾಮ್ರಾಟ್’ ಜೊತೆ ಮಾತನಾಡಿದ ಅವರು, ಮಾನವೀಯತೆಯ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಹಾಗೂ ಎಡಪಂಥೀಯರ ಸೆಲೆಕ್ಟಿವ್ (ಆಯ್ದ) ಕಣ್ಣೀರಿನ ಬಗ್ಗೆ ನೇರ ವಾಗ್ದಾಳಿ ನಡೆಸಿದ್ದಾರೆ.

ಮಾನವೀಯತೆಗೂ ಗಡಿಗಳಿವೆಯೇ? “ಇರಾನ್ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸುವ ಎಡಪಂಥೀಯರ ಕಣ್ಣಿಗೆ, ಕೆಲವೇ ತಿಂಗಳ ಹಿಂದೆ ಬಾಂಗ್ಲಾದೇಶದಲ್ಲಿ ನಡೆದ ಅಮಾನುಷ ಹತ್ಯಾಕಾಂಡಗಳು ಕಾಣಲಿಲ್ಲವೇ? ಜೀವಂತವಾಗಿ ಸುಟ್ಟು ಕರಕಲಾದ ಆ ಮುಗ್ಧರು ಮನುಷ್ಯರಲ್ಲವೇ?” ಎಂದು ದೇಸಾಯಿ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಜಾಗತಿಕ ಯುದ್ಧಗಳನ್ನು ಖಂಡಿಸುವ ಈ ನಾಯಕರಿಗೆ, ನಮ್ಮದೇ ನೆರೆಯಲ್ಲಿ ನಡೆಯುವ ದೌರ್ಜನ್ಯಗಳನ್ನು ಪ್ರಶ್ನಿಸುವ ನೈತಿಕತೆ ಇಲ್ಲವಾಗಿದೆ ಎಂದು ಅವರು ಟೀಕಿಸಿದ್ದಾರೆ.

ನುಸುಳುಕೋರರ ಪರ ನಿಲ್ಲುವುದು ಎಷ್ಟು ಸರಿ? ಭಾರತದ ಆಂತರಿಕ ಭದ್ರತೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಎಡಪಂಥೀಯರ ನಿಲುವುಗಳನ್ನು ಕಟುವಾಗಿ ಪ್ರಶ್ನಿಸಿದ್ದಾರೆ:

  • ಅಕ್ರಮ ವಲಸಿಗರ ಬೆಂಬಲ: ಉಗ್ರವಾದವನ್ನು ಖಂಡಿಸುತ್ತೇವೆ ಎನ್ನುವವರು, ಬಾಂಗ್ಲಾದೇಶದಿಂದ ನುಸುಳಿ ಬಂದು ಅನೈತಿಕ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರನ್ನು ಸಮರ್ಥಿಸಿಕೊಳ್ಳುವುದು ಎಷ್ಟು ಸರಿ?

  • ಅಂಕಿ-ಅಂಶಗಳ ಕಡೆಗಣನೆ: ಅಕ್ರಮ ವಲಸಿಗರ ಅಪರಾಧ ಕೃತ್ಯಗಳ ಬಗ್ಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯಲ್ಲಿ ಸ್ಪಷ್ಟ ಉಲ್ಲೇಖವಿದ್ದರೂ, ಎಡಪಂಥೀಯರು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.

‘ಜಗತ್ತಿಗೆ ಯುದ್ಧ ಬೇಡ, ಬುದ್ಧ ಬೇಕು’ ಭಯೋತ್ಪಾದನೆಗೆ ಬೆಂಬಲ ನೀಡುವ ಮನಸ್ಥಿತಿಯನ್ನು ನಾಗರಿಕ ಸಮಾಜ ಒಕ್ಕೊರಲಿನಿಂದ ಖಂಡಿಸಬೇಕು ಎಂದು ಕರೆ ನೀಡಿದ ಕಲ್ಲೂರ, “ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಯುದ್ಧವನ್ನು ಪ್ರಚೋದಿಸುವ ಬದಲು, ‘ಜಗತ್ತಿಗೆ ಯುದ್ಧ ಬೇಡ, ಬುದ್ಧ ಬೇಕು’ ಎಂಬ ಸ್ಪಷ್ಟ ಸಂದೇಶವನ್ನು ವಿಶ್ವಮಟ್ಟದಲ್ಲಿ ಸಾರಿದ್ದಾರೆ. ಆದರೆ, ಆಂತರಿಕವಾಗಿ ಉಗ್ರವಾದವನ್ನು ಪರೋಕ್ಷವಾಗಿ ಬೆಂಬಲಿಸುವ ಕೆಲವರಿಂದಾಗಿ ದೇಶದ ಶಾಂತಿಗೆ ಕಂಟಕ ಎದುರಾಗಿದೆ” ಎಂದು ಎಚ್ಚರಿಸಿದ್ದಾರೆ.

ಕಾಶ್ಮೀರದ ಇತಿಹಾಸದಿಂದ ಪಾಠ ಕಲಿಯಿರಿ “ಕಳೆದ 50 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಏನಾಗಿತ್ತು ಹಾಗೂ ಅದಕ್ಕೆ ಎಡಪಂಥೀಯರ ವಿಚಾರಧಾರೆಗಳು ಹೇಗೆ ಕಾರಣವಾದವು ಎಂಬುದನ್ನು ಅವರು ಒಮ್ಮೆ ಅಧ್ಯಯನ ಮಾಡಬೇಕು. ಬಂದೂಕಿನ ಮೂಲಕವೇ ಎಲ್ಲವನ್ನೂ ಸಾಧಿಸುತ್ತೇವೆ ಎನ್ನುವವರನ್ನು ಬೆಂಬಲಿಸಿದರೆ ಭವಿಷ್ಯದಲ್ಲಿ ತೀವ್ರ ಪಶ್ಚಾತ್ತಾಪ ಪಡಬೇಕಾಗುತ್ತದೆ. ಜಗತ್ತಿನ ಉಸಾಬರಿ ಬಿಟ್ಟು, ಮೊದಲು ದೇಶದ ಆಂತರಿಕ ಭದ್ರತೆಯ ಬಗ್ಗೆ ಚಿಂತನೆ ನಡೆಸಿ” ಎಂದು ದೇವಿಂದ್ರ ದೇಸಾಯಿ ಕಲ್ಲೂರ ಖಡಕ್ ಎಚ್ಚರಿಕೆ ನೀಡಿದ್ದಾರೆ.


Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು